ಫೆ.10ರಂದು ಬಿಹಾರ ಸಿಎಂ ನಿತೀಶ್‌ ವಿಶ್ವಾಸಮತ ಯಾಚನೆ

KannadaprabhaNewsNetwork | Updated : Jan 31 2024, 08:51 AM IST

ಸಾರಾಂಶ

ಬಿಜೆಪಿಯೊಂದಿಗೆ ಸೇರಿ ಹೊಸ ಸರ್ಕಾರ ರಚಿಸಿರುವ ನಿತೀಶ್‌ ಕುಮಾರ್‌ ಅವರು ಬಿಹಾರ ವಿಧಾನಸಭೆಯಲ್ಲಿ ಫೆ.10ರಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಪಟನಾ: ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಹೊಸ ಜೆಡಿಯು-ಬಿಜೆಪಿ ಸರ್ಕಾರ ಫೆ.10ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದೆ.

ಈ ಸಂಬಂಧ ಬಿಹಾರ ಸಂಸದೀಯ ಇಲಾಖೆ ಮಂಗಳವಾರ ಪರಕಟಣೆ ಹೊರಡಿಸಿದೆ. 

ಅಂದು ಬಜೆಟ್‌ ಅಧಿವೇಶನದ ಮೊದಲ ದಿನ ಆಗಲಿದ್ದು, ರಾಜ್ಯಪಾಲರ ಭಾಷಣದ ಬಳಿಕ ನಿತೀಶ್‌ ವಿಶ್ವಾಸಮತ ಯಾಚಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಬಿಹಾರ ವಿಧಾನಸಭೆ 243 ಸಂಖ್ಯಾಬಲ ಹೊಂದಿದ್ದು, ಬಹುಮತಕ್ಕೆ 122 ಸ್ಥಾನ ಬೇಕು. 

ನಿತೀಶ್‌ಗೆ ಬಿಜೆಪಿ, ಜೆಡಿಯು, ಹಮ್‌ ಪಕ್ಷದ ಶಾಸಕರು ಸೇರಿ ಒಟ್ಟು 128 ಶಾಸಕರ ಬೆಂಬಲವಿದೆ. ವಿಪಕ್ಷಗಳ ಬಳಿ 115 ಶಾಸಕರಿದ್ದಾರೆ.

Share this article