ಸಂಕಟಕ್ಕೆ ಸಿಲುಕಿದ ಆರ್‌ಜೆಡಿ ನಾಯಕ, ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌

KannadaprabhaNewsNetwork |  
Published : Aug 04, 2025, 12:15 AM ISTUpdated : Aug 04, 2025, 02:36 AM IST
Tejashvi Yadav

ಸಾರಾಂಶ

ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರೇ ಇಲ್ಲ ಎಂದು ಆರೋಪಿಸಿದ್ದ ಆರ್‌ಜೆಡಿ ನಾಯಕ, ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ಈಗ ಸಂಕಟಕ್ಕೆ ಸಿಲುಕಿದ್ದಾರೆ 

 ನವದೆಹಲಿ/ಪಟನಾ :  ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರೇ ಇಲ್ಲ ಎಂದು ಆರೋಪಿಸಿದ್ದ ಆರ್‌ಜೆಡಿ ನಾಯಕ, ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ಈಗ ಸಂಕಟಕ್ಕೆ ಸಿಲುಕಿದ್ದಾರೆ.

 ‘ನಿಮ್ಮ ಬಳಿಯಿರುವ ಮತಚೀಟಿಯನ್ನು ತನಿಖೆಗಾಗಿ ನಮಗೆ ಕೊಡಿ’ ಎಂದು ಚುನಾವಣಾ ಆಯೋಗ ಭಾನುವಾರ ಅವರಿಗೆ ಸೂಚಿಸಿದೆ. ತೇಜಸ್ವಿ ಅವರಿಗೆ ಆಯೋಗ ಬರೆದಿರುವ ಪತ್ರದಲ್ಲಿ, ‘ಪತ್ರಿಕಾಗೋಷ್ಠಿಯಲ್ಲಿ ನೀವು ಉಲ್ಲೇಖಿಸಿದ ಎಪಿಕ್‌ (ವೋಟರ್ ಐಡಿ) ಸಂಖ್ಯೆಯನ್ನು ಆಯೋಗ ಅಧಿಕೃತವಾಗಿ ನೀಡಿಲ್ಲ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದ್ದರಿಂದ ವಿವರವಾದ ತನಿಖೆಗಾಗಿ ಅದನ್ನು ಹಸ್ತಾಂತರಿಸಿ’ ಎಂದು ಬರೆಯಲಾಗಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ತೇಜಸ್ವಿ, ಮೊಬೈಲನ್ನು ದೊಡ್ಡ ಪರದೆಗೆ ಸಂಪರ್ಕ ಮಾಡಿ ತಮ್ಮ ಎಪಿಕ್‌ ಸಂಖ್ಯೆಯನ್ನು ಹುಡುಕಿದ್ದರು. ಆಗ ಅದರಲ್ಲಿ ‘ತೇಜಸ್ವಿ ಹೆಸರಿನ ಗುರುಗು ಚೀಟಿ ಇಲ್ಲ’ ಎಂದು ತೋರಿಸಿತ್ತು. ಅದರ ಆಧಾರದಲ್ಲಿ, ‘ನನ್ನ ಹೆಸರು ಪತಪಟ್ಟಿಯಲ್ಲೇ ಇಲ್ಲ’ ಎಂದು ಅವರು ಆರೋಪಿಸಿದ್ದರು.

ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಚುನಾವಣಾ ಆಯೋಗ, ‘ತೇಜಸ್ವಿಯವರು ನಮೂದಿಸಿದ ಸಂಖ್ಯೆ ಅವರದ್ದಲ್ಲ ಎಂದು ಸ್ಪಷ್ಟನೆ ನೀಡಿತ್ತು ಮತ್ತು ಕರಡು ಪಟ್ಟಿಯಲ್ಲಿ ತೇಜಸ್ವಿ ಅವರ ಹೆಸರು ಕ್ರಮ ಸಂಖ್ಯೆ 416ರಲ್ಲಿ ಇದೆ’ ಎಂದು ಸ್ಪಷ್ಟಪಡಿಸಿತ್ತು.

ಆದರೆ ಈಗ ತೇಜಸ್ವಿ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದ ಮತಚೀಟಿ ನಕಲಿ ಚೀಟಿ ಆಗಿರಬಹುದು ಎಂದು ಶಂಕಿಸಿದ್ದ ಆಯೋಗ, ‘ನೀವು ನಿನ್ನೆ ತೋರಿಸಿದ್ದ ಸಂಖ್ಯೆಯಿರುವ ಚೀಟಿಯನ್ನು ಸಲ್ಲಿಸಿ’ ಎಂದು ಸೂಚಿಸಿದೆ. ಅಲ್ಲದೆ, ‘ಈವರೆಗೆ ಯಾವುದೇ ರಾಜಕೀಯ ಪಕ್ಷದ ಕಡೆಯಿಂದಲೂ ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಸುವ ಅಥವಾ ಸೇರಿಸುವ ಮನವಿ ಬಂದಿಲ್ಲ’ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಬಿಜೆಪಿ ಕಿಡಿ:

‘ತೇಜಸ್ವಿ ಅವರ ಅಸಲಿ ಮತಚೀಟಿ ಮತ್ತು ಅವರು ಶನಿವಾರ ತೋರಿಸಿದ್ದರ ಎಪಿಕ್‌ ಸಂಖ್ಯೆಗಳು ಬೇರೆಬೇರೆ ಇವೆ. ಇದರಿಂದ ಅವರು 2 ಮತಚೀಟಿಗಳನ್ನು ಹೊಂದಿದ್ದು ಸಾಬೀತಾಗಿದೆ. ಈ ಮೂಲಕ ತೇಜಸ್ವಿ ಅಪರಾಧ ಮಾಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಕಿಡಿಕಾರಿದ್ದಾರೆ.

ತ.ನಾಡು ಮತಪಟ್ಟಿಗೆ 6.5 ಲಕ್ಷ ಬಿಹಾರಿಗಳು: ಚಿದು ಕಿಡಿ  

ನವದೆಹಲಿ: ‘ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದಂತೆ ತಮಿಳುನಾಡಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನಡೆದಿಲ್ಲ. 6.5 ಲಕ್ಷ ಬಿಹಾರಿ ಮತದಾರರನ್ನು ಅಲ್ಲಿ ಸೇರಿಸಿಲ್ಲ’ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪಿಟಿಐ ನವದೆಹಲಿಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬೆನ್ನಲ್ಲೇ, ಇದೀಗ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಪಿ.ಚಿದಂಬರಂ ಕೂಡ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.‘ಬಿಹಾರ ಮೂಲದ 6.5 ಲಕ್ಷ ಮತದಾರರನ್ನು ತಮಿಳುನಾಡಿನ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ರಾಜ್ಯದ ಚುನಾವಣಾ ಸಂರಚನೆಯನ್ನೇ ಬದಲಾಯಿಸಲು ಆಯೋಗ ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಚುನಾವಣಾ ಆಯೋಗವು ರಾಜ್ಯಗಳ ಚುನಾವಣಾ ಸ್ವರೂಪ ಮತ್ತು ವಿಧಾನವನ್ನೇ ಬದಲಿಸಲು ಹೊರಟಿದೆ. ಈ ಮೂಲಕ ತನ್ನ ಅಧಿಕಾರ ದುರ್ಬಳಕೆಗೆ ಮುಂದಾಗಿದೆ. ಇದರ ವಿರುದ್ಧ ರಾಜಕೀಯ, ಕಾನೂನು ಹೋರಾಟ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.‘ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 65 ಲಕ್ಷ ಮತದಾರರ ಹಕ್ಕು ಅಪಾಯಕ್ಕೆ ಸಿಲುಕಿದ್ದರೆ, 6.5 ಲಕ್ಷ ಮಂದಿ ಬಿಹಾರಿ ವಲಸೆ ಕಾರ್ಮಿಕರ ಹೆಸರು ತಮಿಳುನಾಡಿನ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ. ಇದೊಂದು ಅಪಾಯಕಾರಿ ನಡೆ. ವಲಸೆ ಕಾರ್ಮಿಕರನ್ನು ‘ಶಾಶ್ವತ ವಲಸೆ’ಗೊಂಡವರು ಎಂದು ಕರೆಯಲಾಗುತ್ತಿದೆ. ಇದು ತಮಿಳುನಾಡಲ್ಲಿ ತಮ್ಮ ಆಯ್ಕೆಯ ಸರ್ಕಾರ ರಚಿಸುವ ಮತದಾರರ ಹಕ್ಕಿನಲ್ಲಿನ ಮಧ್ಯಪ್ರವೇಶವಾಗಿದೆ’ ಎಂದು ದೂರಿದ್ದಾರೆ.

‘ಮಾಮೂಲಿಯಂತೆ ವಲಸೆ ಕಾರ್ಮಿಕರು ಯಾಕೆ ಬಿಹಾರಕ್ಕೆ ವಾಪಸ್‌ ಹೋಗಿ ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಮತಹಾಕುವುದಿಲ್ಲ? ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿದ್ದರೆ ಆ ವ್ಯಕ್ತಿ ನಿಶ್ಚಿತ ಅಥವಾ ಶಾಶ್ವತವಾದ ಕಾನೂನುಬದ್ಧ ಮನೆ ಹೊಂದಿರಬೇಕು. ವಲಸೆ ಕಾರ್ಮಿಕರಿಗೆ ಅಂಥ ಮನೆ ಬಿಹಾರದಲ್ಲಿದೆ. ಅವರು ಹೇಗೆ ತಮಿಳುನಾಡಿನ ಮತದಾರರಾಗಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ