ವೈದ್ಯೆಯ 8 ವರ್ಷದ ಹೋರಾಟಕ್ಕೆ ಕೊನೆಗೂ ಜಯ
ಜ್ಯೂಸ್ ಹಾಗೂ ತಂಪುಪಾನೀಯ ಕಂಪನಿಯ ಯಾವುದೇ ಉತ್ಪನ್ನಗಳ ಮೇಲೆ ಓಆರ್‌ಎಸ್ ಎಂದು ಬರೆಯಬಾರದೆಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ. ಇದರೊಂದಿಗೆ ಈ ವಿಷಯದಲ್ಲಿ 8 ವರ್ಷಗಳಿಂದ ಏಕಾಂಗಿ ಹೋರಾಟಕ್ಕಿಳಿದಿದ್ದ ಡಾ। ಶಿವರಂಜಿನಿ ಸಂತೋಷ್‌ಗೆ ಜಯ ಸಿಕ್ಕಿದೆ.
ಹಣ್ಣಿನ ರಸ, ಕಾರ್ಬೋನೇಟೆಡ್ ಅಲ್ಲದ ಪಾನೀಯಗಳ ಪ್ಯಾಕೆಟ್‌ಗಳ ಮೇಲೆ ಓಆರ್‌ಎಸ್ ಎಂದು ಬರೆಯುವುದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಉಲ್ಲಂಘನೆಯಾಗಿರುವ ಕಾರಣ ಓಆರ್‌ಎಸ್ ಎಂದು ಹೆಸರು, ಲೇಬಲ್ ಅಥವಾ ಟ್ರೇಡ್‌ಮಾರ್ಕ್‌ನಲ್ಲಿ ಉಲ್ಲೇಖಿಸಬಾರದು ಎಂದು ಆದೇಶಿಸಲಾಗಿದೆ.ಅನೇಕ ಪಾನೀಯ ಕಂಪನಿಗಳು ತಯಾರಿಸುವ ಜ್ಯೂಸ್‌ಗಳ ಮೇಲೆಯೂ ಓಆರ್‌ಎಸ್ ಎಂದು ಬರೆದು ಕೊಳ್ಳುಗರ ದಾರಿತಪ್ಪಿಸುತ್ತಿವೆ. ಇದನ್ನು ನಿಲ್ಲಿಸುವ ಸಲುವಾಗಿ ಶಿವರಂಜಿನಿ ಅವರು ಕಳೆದ 8 ವರ್ಷಗಳಿಂದ ಒಬ್ಬಂಟಿಯಾಗಿ ಯತ್ನಿಸುತ್ತಿದ್ದರು.