ಕನಿಷ್ಠ ಮೊತ್ತ ಕಾಪಾಡದ ಬ್ಯಾಂಕ್‌ ಖಾತೆಗೆ ದಂಡ ಬೇಡ : ಶಿಫಾರಸು

KannadaprabhaNewsNetwork |  
Published : Feb 14, 2026, 02:00 AM IST
Bank Account

ಸಾರಾಂಶ

ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದಿದ್ದಲ್ಲಿ ಖಾತೆದಾರರಿಗೆ ದಂಡ ಹಾಕುವ ಪದ್ಧತಿಯನ್ನು ರದ್ದು ಮಾಡುವಂತೆ ಸಂಸದೀಯ ಸಮಿತಿಯು ಎಲ್ಲಾ ಬ್ಯಾಂಕುಗಳಿಗೆ ಶಿಫಾರಸು ಮಾಡಿದೆ. 2024-25ರ ಅವಧಿಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಲ್ಲದ ಖಾತೆಗಳಿಂದ 4,871.96 ಕೋಟಿ ರು. ದಂಡ ಸಂಗ್ರಹ ಬೆನ್ನಲ್ಲೇ ಈ ಬೆಳವಣಿಗೆ 

 ನವದೆಹಲಿ: ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದಿದ್ದಲ್ಲಿ ಖಾತೆದಾರರಿಗೆ ದಂಡ ಹಾಕುವ ಪದ್ಧತಿಯನ್ನು ರದ್ದು ಮಾಡುವಂತೆ ಸಂಸದೀಯ ಸಮಿತಿಯು ಎಲ್ಲಾ ಬ್ಯಾಂಕುಗಳಿಗೆ ಶಿಫಾರಸು ಮಾಡಿದೆ. 2024-25ರ ಅವಧಿಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಲ್ಲದ ಖಾತೆಗಳಿಂದ 4,871.96 ಕೋಟಿ ರು. ದಂಡ ಸಂಗ್ರಹವಾಗಿರುವ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ನೀಡಿದ ದೂರಿಗೆ ಪ್ರತಿಕ್ರಿಯೆಯಾಗಿ ಈ ಸೂಚನೆ ನೀಡಿರುವುದು ಗಮನಾರ್ಹ.

ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಆರ್‌ಬಿಐಗೂ ನಿರ್ದೇಶನ

ಖಾತೆದಾರರಿಗೆ ಇಂತಿಷ್ಟು ಮೊತ್ತ ಇರಲೇಬೇಕು ಎಂದು ಸೂಚಿಸಿ, ಇರದಿದ್ದಲ್ಲಿ ದಂಡ ವಿಧಿಸುವ ಬದಲು ಎಲ್ಲರೂ ಕನಿಷ್ಠ ಮೊತ್ತ ಉಳಿಸಿಕೊಳ್ಳುವಂತೆ ಮಾಡಲು ಹೆಚ್ಚುವರಿ ಅಂಕಗಳು, ಕೊಂಚ ಅಧಿಕ ಬಡ್ಡಿಯಂತಹ ಕ್ರಮಗಳನ್ನು ಅನುಸರಿಸಬಹುದು ಎಂದು ಸಮಿತಿ ಸೂಚಿಸಿದೆ. ಜತೆಗೆ ಈ ಸಂಬಂಧ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಆರ್‌ಬಿಐಗೂ ನಿರ್ದೇಶನ ನೀಡಿದೆ.

ನಿರ್ವಹಿಸಲು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಕಷ್ಟ

‘ಬ್ಯಾಂಕುಗಳು ನಿಗದಿಪಡಿಸಿರುವ ಮಿನಿಮಮ್‌ ಬ್ಯಾಲೆನ್ಸ್‌ ಮೊತ್ತ ಅಧಿಕವಿದ್ದು, ಇದನ್ನು ನಿರ್ವಹಿಸಲು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಕಷ್ಟವಾಗುತ್ತದೆ. ಜತೆಗೆ ಅಂತಹ ಖಾತೆಗಳಿಗೆ ಸಾಮಾನ್ಯ ಬಡ್ಡಿ ಕೊಡುವ ಬ್ಯಾಂಕ್‌ಗಳು, ಬ್ಯಾಲೆನ್ಸ್ ನಿರ್ವಹಿಸದಿದ್ದಲ್ಲಿ 15-20 ಪಟ್ಟು ಹೆಚ್ಚು ದಂಡ ವಿಧಿಸುತ್ತವೆ. ಇದು ಅನ್ಯಾಯ’ ಎಂದು ಬ್ಯಾಂಬೂಪೆಕರ್‌ ಎಂಬ ಕಂಪನಿಯ ಸ್ಥಾಪಕ, ಬೆಂಗಳೂರಿನವರಾದ ಪರಮೇಶ್ವರನ್‌ ಕೃಷ್ಣ ಅಯ್ಯರ್‌ ಅವರು ದೂರು ನೀಡಿದ್ದರು.

ಸದ್ಯ ಬಹುತೇಹ ಸರ್ಕಾರಿ ಬ್ಯಾಂಕುಗಳಲ್ಲಿ ದಂಡವನ್ನು ರದ್ದು ಮಾಡಲಾಗಿದೆ. ಆದರೆ ಖಾಸಗಿ ಬ್ಯಾಂಕುಗಳಲ್ಲಿ ದಂಡ ವಸೂಲಿ ಮುಂದುವರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದಿನಿಂದ ಪ್ರಧಾನಿ ಕಚೇರಿಗೆ ಹೊಸ ವಿ‍ಳಾಸ
ಹಸೀನಾ ಸರ್ಕಾರ ಉರುಳಿಸಿದ ಜೆನ್‌ಝೀಗಳಿಗೆ ಹೀನಾಯ ಸೋಲು