ತ.ನಾಡಲ್ಲಿ ಮೈತ್ರಿ ಸರ್ಕಾರ ಹಿಂದೆ ಇರಲಿಲ್ಲ, ಮುಂದೆ ಇರುವುದೂ ಇಲ್ಲ : ಸಂಸದ ಎಂ. ತಂಬಿದೊರೈ

KannadaprabhaNewsNetwork |  
Published : Apr 18, 2025, 12:33 AM ISTUpdated : Apr 18, 2025, 06:26 AM IST
AIADMK-BJP के बीच गठबंधन की घोषणा के बाद अमित शाह और अन्य नेता।

ಸಾರಾಂಶ

‘ಬಿಜೆಪಿಯೊಂದಿಗಿನ ಮೈತ್ರಿ ಚುನಾವಣೆಯ ತನಕ ಮಾತ್ರ ಇರುತ್ತದೆ. ಮೈತ್ರಿ ಸರ್ಕಾರ ರಚನೆ ನಮಗೆ ಒಪ್ಪಿಗೆಯಿಲ್ಲ’ ಎಂದು ಎಐಎಡಿಎಂಕೆ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರು ಹೇಳಿದ ಬೆನ್ನಲ್ಲೇ, ಪಕ್ಷದ ಇನ್ನೊಬ್ಬ ನಾಯಕರಿಂದ ಅದೇ ಮಾದರಿಯ ಹೇಳಿಕೆ ಬಂದಿದೆ.

 ಚೆನ್ನೈ: ‘ಬಿಜೆಪಿಯೊಂದಿಗಿನ ಮೈತ್ರಿ ಚುನಾವಣೆಯ ತನಕ ಮಾತ್ರ ಇರುತ್ತದೆ. ಮೈತ್ರಿ ಸರ್ಕಾರ ರಚನೆ ನಮಗೆ ಒಪ್ಪಿಗೆಯಿಲ್ಲ’ ಎಂದು ಎಐಎಡಿಎಂಕೆ ಅಧ್ಯಕ್ಷ ಎಡಪ್ಪಾಡಿ ಪಳನಿಸ್ವಾಮಿ ಅವರು ಹೇಳಿದ ಬೆನ್ನಲ್ಲೇ, ಪಕ್ಷದ ಇನ್ನೊಬ್ಬ ನಾಯಕರಿಂದ ಅದೇ ಮಾದರಿಯ ಹೇಳಿಕೆ ಬಂದಿದೆ. 

‘ರಾಜ್ಯದಲ್ಲಿ ಈವರೆಗೆ ಮೈತ್ರಿ ಸರ್ಕಾರ ರಚನೆಯಾದ ಇತಿಹಾಸವೇ ಇಲ್ಲ. ಮುಂದೆಯೂ ಇರುವುದಿಲ್ಲ. 2026ರಲ್ಲಿ ಕೂಡ ಎಡಪ್ಪಾಡಿಯವರು ಒಬ್ಬರೇ ಸರ್ಕಾರ ರಚಿಸುತ್ತಾರೆ’ ಎಂದು ಅಣ್ಣಾ ಡಿಎಂಕೆ ನಾಯಕರಾದ ರಾಜ್ಯಸಭಾ ಸಂಸದ ಎಂ. ತಂಬಿದೊರೈ ಗುರುವಾರ ಹೇಳಿದ್ದಾರೆ. 

ಈ ಮೂಲಕ ಏಕಾಂಗಿಯಾಗಿ ಗೆದ್ದರೆ ಬಿಜೆಪಿಯನ್ನು ಅಣ್ಣಾಡಿಎಂಕೆ ಕೈಬಿಡುತ್ತದೆಯೇ ಎಂಬ ಅನುಮಾನ ಮೂಡಿದೆ.‘ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಸರ್ಕಾರ ಇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಹೇಳಿಲ್ಲ. ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚನೆಯಾಗಲಿದೆ ಎಂದಷ್ಟೇ ಘೋಷಿಸಲಾಗಿತ್ತು’ ಎಂದು ಪಳನಿಸ್ವಾಮಿ ಬುಧವಾರ ಹೇಳಿದ್ದರು.

ರಾಷ್ಟ್ರಪಕ್ಷವಾಗಿರುವ ಬಿಜೆಪಿ ಈವರೆಗೆ ತಮಿಳುನಾಡಿನಲ್ಲಿ ಭದ್ರ ನೆಲೆ ಕಂಡುಕೊಂಡಿಲ್ಲ ಎಂಬುದು ಗಮನಾರ್ಹ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ