ಟ್ರಂಪ್‌, ನೆತನ್ಯಾಹು ಹತ್ಯೆಗೆ ಇರಾನ್‌ ಧರ್ಮಗುರು ಕರೆ

KannadaprabhaNewsNetwork |  
Published : Jan 18, 2026, 02:00 AM IST
Iran

ಸಾರಾಂಶ

ಸರ್ವಾಧಿಕಾರಿ ಆಯತೋಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಾವಿನಿಂದ ಇರಾನ್ ಹೊತ್ತಿ ಉರಿಯುತ್ತಿರುವ ನಡುವೆಯೇ, ಪ್ರತಿಭಟನಾಕಾರರಿಗೆ ಮರಣ ದಂಡನೆ ವಿಧಿಸಬೇಕೆಂದು ಇಸ್ಲಾಮಿಕ್‌ ಧರ್ಮಗುರುವೊಬ್ಬರು ಕರೆ ನೀಡಿದ್ದಾರೆ.  ಪ್ರತಿಭಟನಾಕಾರರ ನೆರವಿಗೆ ನಿಂತಿರುವ  ಟ್ರಂಪ್‌ ಅವರ ಹತ್ಯೆಗೆ ನೇರವಾಗಿ ಕರೆ ನೀಡಿದ್ದಾರೆ.

 ದುಬೈ: ಸರ್ವಾಧಿಕಾರಿ ಆಯತೋಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಾವಿನಿಂದ ಇರಾನ್ ಹೊತ್ತಿ ಉರಿಯುತ್ತಿರುವ ನಡುವೆಯೇ, ಪ್ರತಿಭಟನಾಕಾರರಿಗೆ ಮರಣ ದಂಡನೆ ವಿಧಿಸಬೇಕೆಂದು ಇಸ್ಲಾಮಿಕ್‌ ಧರ್ಮಗುರುವೊಬ್ಬರು ಕರೆ ನೀಡಿದ್ದಾರೆ. ಜೊತೆಗೆ, ಪ್ರತಿಭಟನಾಕಾರರ ನೆರವಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಗೆ ನೇರವಾಗಿ ಕರೆ ನೀಡಿದ್ದಾರೆ.

ಇರಾನ್‌ನ ಗಾರ್ಡಿಯನ್‌ ಕೌನ್ಸಿಲ್‌ನ ಸದಸ್ಯರಾಗಿರುವ ಧರ್ಮಗುರು

ಇರಾನ್‌ನ ಗಾರ್ಡಿಯನ್‌ ಕೌನ್ಸಿಲ್‌ನ ಸದಸ್ಯರಾಗಿರುವ ಧರ್ಮಗುರು ಆಯತೋಲ್ಲಾ ಅಹ್ಮದ್‌ ಖತಾಮಿ ರೇಡಿಯೋ ಮೂಲಕ ಸಂದೇಶ ರವಾನಿಸಿದ್ದು, ‘ಶಸ್ತ್ರಸಜ್ಜಿತ ಕಪಟಿಗಳನ್ನು ಕೊಲ್ಲಬೇಕು. ಖಮೇನಿ ವಿರೋಧಿ ಪ್ರತಿಭಟನಾಕಾರರು ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಸೇವಕರಂತೆ ವರ್ತಿಸುತ್ತಿದ್ದಾರೆ. ನೆತನ್ಯಾಹು ಮತ್ತು ಟ್ರಂಪ್‌ ಇರಾನ್‌ನಿಂದ ಬರಲಿರುವ ಕಠಿಣ ಸೇಡಿನ ಕ್ರಮಕ್ಕೆ ಕಾಯಬೇಕು. ಅಮೆರಿಕನ್ನರು ಮತ್ತು ಯಹೂದಿಗಳು ಶಾಂತಿಯನ್ನು ನಿರೀಕ್ಷಿಸಬಾರದು’ ಎಂದಿದ್ದಾರೆ. ಈ ಮೂಲಕ ನೆತನ್ಯಾಹು ಮತ್ತು ಟ್ರಂಪ್‌ಗೆ ನೇರವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ.

ಪ್ರತಿಭಟನೆಗೆ 350 ಮಸೀದಿ ನಾಶ:

ಇರಾನ್‌ನಲ್ಲಿ ಪ್ರತಿಭಟನಾಕಾರರಿಂದ ಉಂಟಾದ ಹಾನಿಯ ಅಂಕಿ ಅಂಶಗಳನ್ನು ಸಹ ಖತಾಮಿ ಹಂಚಿಕೊಂಡಿದ್ದಾರೆ. 350 ಮಸೀದಿಗಳು, 126 ಪ್ರಾರ್ಥನಾ ಮಂಟಪಗಳು, 20 ಇತರ ಪವಿತ್ರ ಸ್ಥಳಗಳು, 80 ಧಾರ್ಮಿಕ ಮುಖಂಡರ ಮನೆಗಳಿಗೆ ಹಾನಿಯಾಗಿದೆ. 400 ಆಸ್ಪತ್ರೆಗಳು, 106 ಆಂಬ್ಯುಲೆನ್ಸ್‌ಗಳು, 71 ಅಗ್ನಿಶಾಮಕ ದಳದ ವಾಹನಗಳು ಮತ್ತು 50 ತುರ್ತು ವಾಹನಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಾಲಿವುಡ್‌ನಲ್ಲಿ ಕೋಮುತಾರತಮ್ಯ- 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ : ರೆಹಮಾನ್‌
ಮಹಾರಾಷ್ಟ್ರ ತಂಡಗಳಿಂದ ರಾಜ್ಯದಲ್ಲಿ ಡ್ರಗ್ಸ್‌ ಪತ್ತೆ- ನಮ್ಮ ಪೊಲೀಸ್‌ ವೈಫಲ್ಯ : ಸಿದ್ದು ಗರಂ