‘ಏರಿಂಡಿಯಾ ವಿಮಾನವು ಗುರುತರ ಬ್ರಾಂಡ್ ಆಗಲು ಯೋಗ್ಯವಲ್ಲ. ಏಕೆಂದರೆ ಹೇಳದೇ ಕೇಳದೇ ನನ್ನ ಬಿಸಿನೆಸ್ ಕ್ಲಾಸ್ ಸೀಟನ್ನು ಸೀಟ್ ಡೀಗ್ರೇಡ್ ಮಾಡಲಾಗಿದೆ’ ಎಂದು 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕ್ಕಿ ಕೇಜ್ ಅಸಮಾಧಾನ ಹೊರಹಾಕಿದ್ದಾರೆ.
ನವದೆಹಲಿ: ‘ಏರಿಂಡಿಯಾ ವಿಮಾನವು ಗುರುತರ ಬ್ರಾಂಡ್ ಆಗಲು ಯೋಗ್ಯವಲ್ಲ. ಏಕೆಂದರೆ ಹೇಳದೇ ಕೇಳದೇ ನನ್ನ ಬಿಸಿನೆಸ್ ಕ್ಲಾಸ್ ಸೀಟನ್ನು ಸೀಟ್ ಡೀಗ್ರೇಡ್ ಮಾಡಲಾಗಿದೆ’ ಎಂದು 3 ಬಾರಿ ಗ್ರಾಮಿ ಪ್ರಶಸ್ತಿ ವಿಜೇತ, ಕನ್ನಡಿಗ ರಿಕ್ಕಿ ಕೇಜ್ ಅಸಮಾಧಾನ ಹೊರಹಾಕಿದ್ದಾರೆ.
ಶನಿವಾರ ಮುಂಬೈನಿದ ಬೆಂಗಳೂರಿಗೆ ಕೇಜ್ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆಗ ನಡೆದ ಘಟನೆ ಬಗ್ಗೆ ಎಕ್ಸ್‌ನಲ್ಲಿ ಅಸಮಾಧಾನ ತೋಡಿಕೊಂಡಿರುವ ಕೇಜ್,‘ ಏರ್ ಇಂಡಿಯಾ ಹೇಳದೆ ಕೇಳದೆ, ಬಿಸಿನೆಸ್ ಕ್ಲಾಸ್ ಟಿಕೆಟ್‌ನಿಂದ ಕೆಳ ಸ್ತರದ ಸೀಟ್ ಕೊಟ್ಟಿದೆ. ನನ್ನ ಟಿಕೆಟ್ ಹಣವನ್ನೂ ಮರಳಿಸಲಿಲ್ಲ. ಇದನ್ನು ಕೇಳಿದ್ದಕ್ಕೆ ಸಿಬ್ಬಂದಿ ತುಂಬಾ ರೋಷವಾಗಿ ವರ್ತಿಸಿದ್ದಾರೆ. ಈ ಘಟನೆ ವರ್ಷದಲ್ಲಿ ಮೂರನೇಯದ್ದಾಗಿದ್ದು, ಏರ್ ಇಂಡಿಯಾ ಬ್ರಾಂಡ್ ಆಗಲು ಯೋಗ್ಯವಲ್ಲದ ಸಂಸ್ಥೆ’ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ‘ತಾಂತ್ರಿಕ ದೋಷಕ್ಕೊಳಗಾದ ನಿಗದಿತ ವಿಮಾನದ ಬದಲು ‘ಆಲ್ ಎಕಾನಮಿ ಕ್ಲಾಸ್’ ವಿಮಾನ ಹಾರಿಸಲಾಯಿತು. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.