ಒಬಿಸಿ ಏಕಪೋಷಕಿಯ ಮಕ್ಕಳನ್ನೂ ಅದೇ ವರ್ಗದಲ್ಲಿ ಪರಿಗಣಿಸಿ: ಸುಪ್ರೀಂ

Published : Jun 24, 2025, 08:16 AM IST
Supreme Court of India (Photo/ANI)

ಸಾರಾಂಶ

ಒಬಿಸಿ ವರ್ಗಕ್ಕೆ ಸೇರಿದ ಏಕ ಪೋಷಕಿಯ ಮಕ್ಕಳನ್ನು ಆಕೆಯ ವರ್ಗದಲ್ಲೇ ಪರಿಗಣಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ‘ಮುಖ್ಯ’ ಎಂದು ಕರೆದಿರುವ ಸುಪ್ರೀಂ ಕೋರ್ಟ್‌, ಅದಕ್ಕೆ ಪೂರಕವಾದ ಮಹತ್ವದ ಆದೇಶ ಹೊರಡಿಸಿದೆ.

 ನವದೆಹಲಿ: ಒಬಿಸಿ ವರ್ಗಕ್ಕೆ ಸೇರಿದ ಏಕ ಪೋಷಕಿಯ ಮಕ್ಕಳನ್ನು ಆಕೆಯ ವರ್ಗದಲ್ಲೇ ಪರಿಗಣಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ‘ಮುಖ್ಯ’ ಎಂದು ಕರೆದಿರುವ ಸುಪ್ರೀಂ ಕೋರ್ಟ್‌, ಅದಕ್ಕೆ ಪೂರಕವಾದ ಮಹತ್ವದ ಆದೇಶ ಹೊರಡಿಸಿದೆ.

ದೆಹಲಿಯಲ್ಲಿರುವ ನಿಯಮದ ಪ್ರಕಾರ, ಒಬ್ಬರನ್ನು ಒಬಿಸಿ ವರ್ಗಕ್ಕೆ ಸೇರಿಸಲು, ತಾಯಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದರೆ ಸಾಲದು. ಅವರ ತಂದೆಯ ಕಡೆಯವರ ಒಬಿಸಿ ಪ್ರಮಾಣಪತ್ರ ಅಗತ್ಯ. ಹೀಗಿರುವಾಗ, ಮಗುವೊಂದು ಕೇವಲ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದು, ಆಕೆ ಒಬಿಸಿ ವರ್ಗಕ್ಕೆ ಸೇರಿದವಳಾಗಿದ್ದರೆ, ಮಗುವನ್ನೂ ಅದೇ ವರ್ಗದಲ್ಲಿ ಪರಿಗಣಿಸಬೇಕು ಎಂದು ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.

ಇದು ಮಹತ್ವಪೂರ್ಣ ವಿಷಯ ಎಂದ ನ್ಯಾ। ಕೆ.ವಿ. ವಿಶ್ವನಾಥನ್‌ ಮತ್ತು ಎನ್‌. ಕೋಟೀಶ್ವರ್‌ ಸಿಂಗ್‌ ಅವರ ಪೀಠ, ಅದರ ವಿಸ್ತೃತ ವಿಚಾರಣೆ ಅಗತ್ಯ ಎಂದಿದೆ.

ಈ ಮೊದಲು, ಅರ್ಜಿಗೆ ಪ್ರತಿಕ್ರಿಯಿಸಿವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಕೋರ್ಟ್‌ ನಿರ್ದೇಶಿಸಿತ್ತು.

PREV
Read more Articles on

Recommended Stories

ಸಿಜೆಐ ಮೇಲಿನ ಶೂ ದಾಳಿಗೆ ಪಶ್ಚಾತ್ತಾಪವೇನಿಲ್ಲ : ವಕೀಲ
ಹಿಮಾಚಲ: ಬಸ್‌ ಮೇಲೆ ಗುಡ್ಡ ಕುಸಿದು 18 ಸಾವು