ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಗೆ ಹುಚ್ಚು ಪ್ರೇಮಿ ಭೀಕರ ಹಲ್ಲೆ!

Published : Nov 01, 2026, 05:53 AM IST
andhra pradesh school attack class 10 girl chainsaw anantapur raptadu

ಸಾರಾಂಶ

21 ವರ್ಷದ ಪಾಗಲ್‌ ಪ್ರೇಮಿಯೊಬ್ಬ ತರಗತಿ ನಡೆಯುತ್ತಿದ್ದಾಗಲೇ ಶಾಲೆಗೆ ನುಗ್ಗಿ 10ನೇ ತರಗತಿ ವಿದ್ಯಾರ್ಥಿಯರಿಬ್ಬರ ಮೇಲೆ ಯಾಂತ್ರಿಕ ಗರಗಸದಿಂದ ಹಲ್ಲೆ ನಡೆಸಿ, ಆಕೆಯ ಕೈಯನ್ನು ಬಹುತೇಕ ತುಂಡು ಮಾಡಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ಅಮರಾವತಿ: 21 ವರ್ಷದ ಪಾಗಲ್‌ ಪ್ರೇಮಿಯೊಬ್ಬ ತರಗತಿ ನಡೆಯುತ್ತಿದ್ದಾಗಲೇ ಶಾಲೆಗೆ ನುಗ್ಗಿ 10ನೇ ತರಗತಿ ವಿದ್ಯಾರ್ಥಿಯರಿಬ್ಬರ ಮೇಲೆ ಯಾಂತ್ರಿಕ ಗರಗಸದಿಂದ ಹಲ್ಲೆ ನಡೆಸಿ, ಆಕೆಯ ಕೈಯನ್ನು ಬಹುತೇಕ ತುಂಡು ಮಾಡಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ತರಗತಿ ನಡೆಯುವ ಹೊತ್ತಿನಲ್ಲೇ ಶಿಕ್ಷಕರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿಯ ಕೈ ಬಹುತೇಕ ತುಂಡಾಗಿದೆ. ಹೀಗಾಗಿ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರೀನ್‌ ಕಾರಿಡಾರ್ ನಿರ್ಮಾಣದ ಮೂಲಕ ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆರೋಪಿ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಏನಾಯ್ತು?:

ಅನಂತಪುರ ಜಿಲ್ಲೆಯ ರಪ್ತಾಡು ಗ್ರಾಮದ ಜಿಲ್ಲಾ ಪರಿಷತ್‌ ಹೈಸ್ಕೂಲ್‌ಗೆ ಬೆಳಗ್ಗೆ 10.30ರ ಸುಮಾರಿಗೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಇವರಲ್ಲಿ ಗಂಭೀರ ಗಾಯಗೊಂಡ ಒಬ್ಬಾಕೆಯನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಆರೋಪಿ ಬಂಧನ:

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಯನ್ನು ಹೇಮಂತ್‌ ಅಲಿಯಾಸ್‌ ದಮ್ಮು ಎಂದು ಗುರುತಿಸಲಾಗಿದ್ದು, ದಾಳಿ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಧರ್ಮಾವರಂ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ತೀವ್ರವಾಗಿ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ, ದಾಳಿಕೋರನ ಸಂಬಂಧಿಯಾಗಿದ್ದಾಳೆ. ಆಕೆ ಆತನ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ ಆತ ಈ ಕೃತ್ಯ ಎಸಗಿದ್ದಾನೆ. ಆರೋಪಿ ಅನಾಥನಾಗಿದ್ದು, ಸೋದರಿ ಜತೆ ವಾಸವಿದ್ದ ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕರ್ನಾಟಕಕ್ಕೆ ಕೇಂದ್ರ ₹4,500 ಕೋಟಿ ತೆರಿಗೆ ಪಾಲು ಬಿಡುಗಡೆ
ಸಿಇಸಿಗೆ ವಿಪಕ್ಷಗಳ ವಾಗ್ದಂಡನೆ - ಖರ್ಗೆ ದಿಲ್ಲಿ ನಿವಾಸದಲ್ಲಿ ಅಣಕು ಕಾರ್ಯಕ್ರಮ