ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಲಾಗುವ ತೆರಿಗೆ ಪಾಲಿನಲ್ಲಿ 1,09,019 ಕೋಟಿ ರು.ಗಳನ್ನು (1.09 ಲಕ್ಷ ಕೋಟಿ ರು.) ಶನಿವಾರ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆಯಾಗಿದೆ
ನವದೆಹಲಿ: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಲಾಗುವ ತೆರಿಗೆ ಪಾಲಿನಲ್ಲಿ 1,09,019 ಕೋಟಿ ರು.ಗಳನ್ನು (1.09 ಲಕ್ಷ ಕೋಟಿ ರು.) ಶನಿವಾರ ಬಿಡುಗಡೆ ಮಾಡಿದೆ.
ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆ
ಈ ಪೈಕಿ ಕರ್ನಾಟಕಕ್ಕೆ 4,504 ಕೋಟಿ ರು. ಹಂಚಿಕೆಯಾಗಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ 2ನೇ ಹೆಚ್ಚುವರಿ ಕಂತು
ನಿಯಮಿತ ಮಾಸಿಕ ಹಂಚಿಕೆಯ ಹೊರತಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ 2ನೇ ಹೆಚ್ಚುವರಿ ಕಂತು ಇದಾಗಿದೆ. ಕಳೆದ ಆಗಸ್ಟ್ನಲ್ಲಿ 1.09 ಲಕ್ಷ ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಹಬ್ಬದ ಋತುವಿನಲ್ಲಿ ರಾಜ್ಯಗಳು ವಿವಿಧ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿ ಕೊರತೆಯನ್ನು ನೀಗಿಸಲು ಈ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
