;Resize=(412,232))
ನವದೆಹಲಿ: ಪ್ರಯಾಣಕ್ಕೆ ವಾಹನ ಬುಕ್ ಮಾಡುವ ವೇಳೆಯೇ ಹೆಚ್ಚುವರಿ ಹಣ ಪಾವತಿಸುವಂತೆ ( ಟಿಪ್ಸ್) ಗ್ರಾಹಕರಿಗೆ ಕೋರುತ್ತಿದ್ದ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಓಲಾ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದೆ.
ಪ್ರಿ-ರೈಡ್ ಟಿಪ್ ಅಥವಾ ಆಡ್-ಆನ್ ಫೀಚರ್ ಗ್ರಾಹಕರನ್ನು ದಾರಿ ತಪ್ಪಿಸುತ್ತದೆ. ಇದು ಅನ್ಯಾಯದ ವ್ಯಾಪಾರ ಪದ್ಧತಿಗೆ ಸಮನಾಗಿರುತ್ತದೆ ಎಂದು ಪ್ರಾಧಿಕಾರ ಹೇಳಿದೆ. ‘ಪ್ರಯಾಣ ಪೂರ್ಣಗೊಳ್ಳುವ ಮೊದಲು, ಮುಂಗಡ ದರಕ್ಕಿಂತ ಹೆಚ್ಚಿನ ಪಾವತಿಯನ್ನು ಕೋರುವ ಎಲ್ಲಾ ಸಂದೇಶಗಳನ್ನು ತಕ್ಷಣವೇ ನಿಲ್ಲಿಸಿ’ ಸಿಸಿಪಿಎ ಆದೇಶಿಸಿದೆ.
ಪ್ರಯಾಣಿಕರು ಆ್ಯಪ್‌ನಲ್ಲಿ ರೈಡ್ ಬುಕ್ಕಿಂಗ್ ಮಾಡಿಕೊಳ್ಳುವ ವೇಳೆ ವೇಗದ ಬುಕ್ಕಿಂಗ್‌ಗೆ ಹೆಚ್ಚುವರಿ ಹಣವನ್ನು ಪಾವತಿಸುವಂತೆ ಪ್ರೇರೇಪಿಸುವ ಟಿಪ್ಸ್ ಸಂದೇಶ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಓಲಾ ಆ ಬಳಿಕ ಟಿಪ್ ಅನ್ನು ಆ್ಯಡ್ ಆನ್ ಎಂದು ಮರುನಾಮಕರಣ ಮಾಡಿತು. ಆದರೂ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿರುವುದನ್ನು ನಿಲ್ಲಿಸಿರಲಿಲ್ಲ.
ಹಾಗಾಗಿ ಇದನ್ನು ಪರಿಶೀಲಿಸಿದ ಸಿಸಿಪಿಎ ದಂಡ ವಿಧಿಸಿ ತಕ್ಷಣವೇ ಈ ಪದ್ಧತಿ ನಿಲ್ಲಿಸುವಂತೆ ಸೂಚಿಸಿದೆ. ಮೊದಲೇ ನಿಗದಿಪಡಿಸಿದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಅನ್ಯ ಮಾರ್ಗ ಬಳಸಿ ಒತ್ತಾಯಿಸ ಕೂಡದು ಎಂದು ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.