ವಿಮಾನ ಪತನ ದಿನವೇ ಅಕ್ಷರಶಃಘಟನೆ ರೀತಿಯದ್ದೇ ಜಾಹೀರಾತು!

KannadaprabhaNewsNetwork |  
Published : Jun 14, 2025, 02:42 AM ISTUpdated : Jun 14, 2025, 03:53 AM IST
ಜಾಹೀರಾತು  | Kannada Prabha

ಸಾರಾಂಶ

ಏರ್ ಇಂಡಿಯಾ ವಿಮಾನ ದುರಂತ ನಡೆದ ದಿನವೇ ಗುಜರಾತ್‌ನ ‘ಮಿಡ್ ಡೇ’ ಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದ ಜಾಹೀರಾತೊಂದು ಭಾರೀ ಅಚ್ಚರಿಗೆ ಕಾರಣವಾಗಿದೆ.

 ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತ ನಡೆದ ದಿನವೇ ಗುಜರಾತ್‌ನ ‘ಮಿಡ್ ಡೇ’ ಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದ ಜಾಹೀರಾತೊಂದು ಭಾರೀ ಅಚ್ಚರಿಗೆ ಕಾರಣವಾಗಿದೆ.

ವಿಮಾನ ಪತನವಾದ ದಿನ ಬೆಳಗ್ಗೆ ಮಿಡ್-ಡೇ ಪತ್ರಿಕೆಯ ಮುಖಪುಟದಲ್ಲಿ ಕಿಡ್‌ಝಾನಿಯಾ ಸಂಸ್ಥೆಯ ಜಾಹೀರಾತು ಪ್ರಕಟಗೊಂಡಿತ್ತು. 4-16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಪುಟ್ಟ ಕ್ರೀಡಾ ನಗರವಾದ ಕಿಡ್‌ಝಾನಿಯಾ, ಮುಂಬರುವ ಫಾದರ್ಸ್ ಡೇ ವಾರಾಂತ್ಯದ ಕಾರ್ಯಕ್ರಮವನ್ನು ಪ್ರಚಾರ ಮಾಡುವ ಜಾಹೀರಾತು ನೀಡಿತ್ತು. ಆ ಜಾಹೀರಾತಿನ ವಿನ್ಯಾಸದಲ್ಲಿ, ಕಟ್ಟಡದಿಂದ ಏರ್ ಇಂಡಿಯಾ ವಿಮಾನ ಹೊರಬಂದಿದ್ದನ್ನು ಚಿತ್ರಿಸಲಾಗಿತ್ತು. ಅದೇ ದಿನ ಸಂಭವಿಸಿದ ವಿಮಾನ ದುರಂತದಲ್ಲಿಯೂ ವಿಮಾನದ ಭಾಗವೊಂದು ಅದೇ ರೀತಿಯಲ್ಲಿ ಕಟ್ಟಡದಿಂದ ಹೊರಬಂದಿತ್ತು.

ಆದರೆ ಕಿಡ್‌ಝಾನಿಯಾ ಸಂಸ್ಥೆ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ‘ದುರದೃಷ್ಟಕರ ಘಟನೆ ನಡೆಯುವ ಮೊದಲೇ ಪತ್ರಿಕೆಗೆ ಜಾಹೀರಾತು ನೀಡಲಾಗಿತ್ತು. ಜಾಹೀರಾತಿನ ಮುಂದಿನ ಪ್ರಚಾರವನ್ನು ತಡೆಹಿಡಿದಿದ್ದೇವೆ’ ಎಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ