ಅಚ್ಚರಿಯ ನಡೆಯೊಂದರಲ್ಲಿ ಜಯಲಲಿತಾ ಶಿಷ್ಯ ಪನ್ನೀರ್‌ಸೆಲ್ವಂ ಡಿಎಂಕೆಗೆ !

KannadaprabhaNewsNetwork |  
Published : Feb 28, 2026, 01:45 AM IST
o paneer selvam

ಸಾರಾಂಶ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಅಚ್ಚರಿಯ ನಡೆಯೊಂದರಲ್ಲಿ ಅಣ್ಣಾ ಡಿಎಂಕೆ ಮಾಜಿ ಅಧಿನಾಯಕಿ ದಿ. ಜೆ. ಜಯಲಲಿತಾ ಅವರ ಕಟ್ಟಾ ಶಿಷ್ಯ, 3 ಬಾರಿಯ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಶುಕ್ರವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. 

 ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಅಚ್ಚರಿಯ ನಡೆಯೊಂದರಲ್ಲಿ ಅಣ್ಣಾ ಡಿಎಂಕೆ ಮಾಜಿ ಅಧಿನಾಯಕಿ ದಿ. ಜೆ. ಜಯಲಲಿತಾ ಅವರ ಕಟ್ಟಾ ಶಿಷ್ಯ, 3 ಬಾರಿಯ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಶುಕ್ರವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ. ಇದು ಚುನಾವಣೆಯನ್ನು ಎದುರುನೋಡುತ್ತಿರುವ ರಾಜ್ಯ ರಾಜಕೀಯಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.

ಎಐಎಡಿಎಂಕೆಯಿಂದ ಭಿನ್ನಮತ

ಎಐಎಡಿಎಂಕೆಯಿಂದ ಭಿನ್ನಮತದ ಕಾರಣ ಈಗಾಗಲೇ ಉಚ್ಚಾಟಿತರಾದ್ದ ಪನ್ನೀರ್‌ಸೆಲ್ವಂ ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಮ್ಮುಖದಲ್ಲಿ, ಪುತ್ರ ಪಿ. ರವೀಂದ್ರನಾಥ್‌ ಕುಮಾರ್‌ ಹಾಗೂ ಬೆಂಬಲಿಗರ ಜೊತೆಗೂಡಿ ಪಕ್ಷಕ್ಕೆ ಔಪಚಾರಿಕವಾಗಿ ಸೇರ್ಪಡೆಗೊಂಡರು. ಆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಒಬ್ಬ ನಿರಂಕುಶಾಧಿಕಾರಿ ಮತ್ತು ದುರಹಂಕಾರಿ. ಅವರು ಎಲ್ಲಾ ಸಮಯದಲ್ಲೂ ಎಐಎಡಿಎಂಕೆಗೆ ಗೆಲುವು ಇಲ್ಲ ಎಂಬ ಪರಿಸ್ಥಿತಿಯನ್ನು ಸೃಷ್ಟಿಸಿದವರು. ಆದರೆ ಸಿಎಂ ಸ್ಟಾಲಿನ್ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಎಲ್ಲಾ ವರ್ಗದ ಜನರಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುತ್ತಾರೆ. ಡಿಎಂಕೆಯನ್ನು ವಿರೋಧಿಸುವ ಯಾವುದೇ ಪಕ್ಷವಿಲ್ಲ’ ಎಂದರು.

ಜಯಾ ಕಟ್ಟಾ ಶಿಷ್ಯ:

ಜಯಲಲಿತಾ ಅವರ ಕಟ್ಟಾ ಅನುಯಾಯಿ ಆಗಿದ್ದ ಪನ್ನೀರಸೆಲ್ವಂ ಜಯಲಲಿತಾ ಅವರು ಜೈಲು ಸೇರಿದಾಗ ಸಿಎಂ ಆಗಿದ್ದರು. ಬಳಿಕ ಜಯಾ ಬಂಧಮುಕ್ತರಾದಾಗ ಅವರಿಗೇ ಪಟ್ಟ ಬಿಟ್ಟುಕೊಟ್ಟಿದ್ದರು. ಆದರೆ ಜಯಲಲಿತಾ ನಿಧನಾ ನಂತರ ಪಕ್ಷದ ಎಡಪ್ಪಾಡಿ ಕೆ. ಪಳನಿಸ್ವಾಮಿ ಜತೆ ಅವರು ಸಂಘರ್ಷ ನಡೆಸಿದ್ದರು. ಹೀಗಾಗಿ ಅವರನ್ನು 2022ರಲ್ಲಿ ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಸ್ವತಂತ್ರ ಬಣ ರಚಿಸಿಕೊಂಡು ಎನ್‌ಡಿಎ ಸೇರಿದ್ದರು. ಆದರೆ 2025ರಲ್ಲಿ ಬಿಜೆಪಿ ತನಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು. ನಂತರ ಅಣ್ಣಾಡಿಎಂಕೆ ಮತ್ತೆ ಸೇರಲು ಹಲವಾರು ಸಲ ಮನವಿ ಮಾಡಿದರೂ ತಿರಸ್ಕೃತರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ
ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌