ಸಾಮಾಜಿಕ ಜಾಲತಾಣದಲ್ಲಿ ನಟಿ ರೋಸ್‌ ಬಗ್ಗೆ ಅಶ್ಲೀಲ ಟೀಕೆ: ಓರ್ವ ಬಂಧನ, 30 ಮಂದಿ ವಿರುದ್ಧ ಕೇಸ್‌

KannadaprabhaNewsNetwork |  
Published : Jan 07, 2025, 12:30 AM ISTUpdated : Jan 07, 2025, 04:38 AM IST
ರೋಸ್‌ | Kannada Prabha

ಸಾರಾಂಶ

ಅಶ್ಲೀಲ ಟೀಕೆ ಮಾಡಿ, ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ’ಎಂದು ಮಲಯಾಳಂ ನಟಿ ಹನಿ ರೋಸ್‌ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ನಟಿಗೆ ನಿಂದನೆ ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದು, 30 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಿರುವನಂತಪುರಂ: ‘ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಟೀಕೆ ಮಾಡಿ, ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ’ಎಂದು ಮಲಯಾಳಂ ನಟಿ ಹನಿ ರೋಸ್‌ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ನಟಿಗೆ ನಿಂದನೆ ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದು, 30 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಟಿ ರೋಸ್‌ ಭಾನುವಾರ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೊಚ್ಚಿ ಸೆಂಟ್ರಲ್ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ನಟಿ, ಆ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ತನ್ನನ್ನು ಹಿಂಬಾಲಿಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.

ನಮ್ಮದೇ ಗ್ಯಾರಂಟಿಗಳಿಂದ ಸಾಲ ಮನ್ನಾ ವಿಳಂಬ: ಮಹಾ ಸಚಿವ

ಮುಂಬೈ: ಕರ್ನಾಟಕದ ಗೃಹ ಲಕ್ಷ್ಮೀ ಯೋಜನೆ ರೀತಿ ಮಹಾರಾಷ್ಟ್ರದ ಲಡ್ಕಿ ಬಹೆನ್‌ ಯೋಜನೆಯಿಂದಾಗಿ ರೈತರ ಸಾಲಮನ್ನ ವಿಳಂಬವಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವರೊಬ್ಬರು ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಸಚಿವ ಮಾಣಿಕ್‌ರಾವ್‌ ಕೊಕಾಟೆ, ಮಹಿಳೆಯರಿಗೆ ತಿಂಗಳಿಗೆ 1500 ರು. ಭತ್ಯೆ ನೀಡುವ ಯೋಜನೆಯಿಂದಾ ಬೊಕ್ಕಸಕ್ಕೆ ಸ್ವಲ್ಪ ಹೊರೆಯಾಗಿದೆ. ಇದರಿಂದ ಚುನಾವಣೆ ಮುನ್ನ ಮಹಾಯುತಿ ಕೂಟ ಘೋಷಿಸಿದ್ದ ರೈತರ ಸಾಲ ಮನ್ನಾ ಸ್ವಲ್ಪ ಕಾಲ ವಿಳಂಬವಾಗುತ್ತಿದೆ. ಒಮ್ಮೆ ಆದಾಯ ಒಳಹರಿವಾದ ಬಳಿಕ ರೈತರ ಸಾಲ ಮನ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ಲಡ್ಕಿ ಬಹೆನ್‌ ಯೋಜನೆಯು ಮಹಿಳೆಯರಿಗೆ ತಿಂಗಳಿಗೆ 1500 ರು. ಮಾಸಾಶನ ನೀಡುವ ಯೋಜನೆಯಾಗಿದೆ.

ಜ.17ಕ್ಕೆ ಕಂಗನಾ ನಟನೆಯ ‘ಎಮರ್ಜೆನ್ಸಿ’ ಬಿಡುಗಡೆ

ನವದೆಹಲಿ: ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್‌ ಅಭಿನಯದ ಬಹು ನಿರೀಕ್ಷಿತ ‘ಎಮರ್ಜೆನ್ಸಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಜ.17ರಂದು ಸಿನಿಮಾ ತೆರೆಗೆ ಬರಲಿದೆ.ನಟಿ ಕಂಗನಾ ಈ ಸಿನಿಮಾದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿದ್ದಾರೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಾಧರಿತ ಈ ಸಿನಿಮಾ ಕಳೆದ ವರ್ಷದ ಸೆ.6ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಗೆ ಸೆಂಟ್ರಲ್ ಬೋರ್ಡ್‌ ಆಫ್ ಫಿಲ್ಮ್‌ ಸರ್ಟಿಫಿಕೇಶನ್ ಸಿಗದ ಕಾರಣ ಮುಂದೂಡಿಕೆಯಾಗಿತ್ತು. ಅಲ್ಲದೇ ಬಿಡುಗಡೆಗೆ ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್‌ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು.

ಟ್ರೇಲರ್‌ ರಿಲೀಸ್‌ ಬಳಿಕ ಕಂಗನಾ ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡಿದ್ದು, ‘ಕೊನೆಗೂ ಜ.17ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಸಂತೋಷವಾಗಿದೆ. ಇದು ಕೇವಲ ವಿವಾದಾತ್ಮಕ ನಾಯಕಿ ಬಗ್ಗೆಗಿನ ಕಥೆಯಲ್ಲ. ಪ್ರಸ್ತುತ ವಿಷಯಗಳ ಬಗ್ಗೆಯೂ ಹೇಳುತ್ತದೆ. ರಾಜಕೀಯ ನಾಟಕದ ನಡುವೆ ಸಿನಿಮಾ ಬಿಡುಗಡೆ ಸವಾಲಿನಿಂದ ಕೂಡಿತ್ತು’ ಎಂದಿದ್ದಾರೆ.

ನಮ್ಮದೇ ಗ್ಯಾರಂಟಿಗಳಿಂದ ಸಾಲ ಮನ್ನಾ ವಿಳಂಬ: ಮಹಾ ಸಚಿವ

ಮುಂಬೈ: ಕರ್ನಾಟಕದ ಗೃಹ ಲಕ್ಷ್ಮೀ ಯೋಜನೆ ರೀತಿ ಮಹಾರಾಷ್ಟ್ರದ ಲಡ್ಕಿ ಬಹೆನ್‌ ಯೋಜನೆಯಿಂದಾಗಿ ರೈತರ ಸಾಲಮನ್ನ ವಿಳಂಬವಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವರೊಬ್ಬರು ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಸಚಿವ ಮಾಣಿಕ್‌ರಾವ್‌ ಕೊಕಾಟೆ, ಮಹಿಳೆಯರಿಗೆ ತಿಂಗಳಿಗೆ 1500 ರು. ಭತ್ಯೆ ನೀಡುವ ಯೋಜನೆಯಿಂದಾ ಬೊಕ್ಕಸಕ್ಕೆ ಸ್ವಲ್ಪ ಹೊರೆಯಾಗಿದೆ. ಇದರಿಂದ ಚುನಾವಣೆ ಮುನ್ನ ಮಹಾಯುತಿ ಕೂಟ ಘೋಷಿಸಿದ್ದ ರೈತರ ಸಾಲ ಮನ್ನಾ ಸ್ವಲ್ಪ ಕಾಲ ವಿಳಂಬವಾಗುತ್ತಿದೆ. ಒಮ್ಮೆ ಆದಾಯ ಒಳಹರಿವಾದ ಬಳಿಕ ರೈತರ ಸಾಲ ಮನ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ಲಡ್ಕಿ ಬಹೆನ್‌ ಯೋಜನೆಯು ಮಹಿಳೆಯರಿಗೆ ತಿಂಗಳಿಗೆ 1500 ರು. ಮಾಸಾಶನ ನೀಡುವ ಯೋಜನೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!