ಜೈಪುರ: ಕೇಂದ್ರ ಚುನಾವಣಾ ಆಯೋಗವು ಘೋಷಣೆ ಮಾಡಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ನ.23ರಂದು ರಾಜಸ್ಥಾನ ಚುನಾವಣೆ ನಿಗದಿಯಾಗಿದ್ದು, ‘ನ.23ರಂದೇ ರಾಜಸ್ಥಾನದಲ್ಲಿ ಬರೋಬ್ಬರಿ 1 ಲಕ್ಷ ಮದುವೆಗಳಿವೆ. ಹೀಗಾಗಿ ಅಂದು ಚುನಾವಣೆ ನಡೆಸುವುದು ಸೂಕ್ತವಲ್ಲ. ರಾಜ್ಯದಲ್ಲಿ ಚುನಾವಣಾ ದಿನಾಂಕವನ್ನು ಬದಲಾಯಿಸಿ’ ಎಂದು ರಾಜಸ್ಥಾನ ಬಿಜೆಪಿ ಮುಖಂಡ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಆಗ್ರಹಿಸಿದ್ದಾರೆ. ಒಂದು ಲಕ್ಷ ಮದುವೆಯೆಂದರೆ ರಾಜ್ಯದ ಬಹುತೇಕ ಜನರು ಅಂದು ಮದುವೆ ಸಮಾರಂಭಗಳಲ್ಲಿ ತೊಡಗಿರುತ್ತಾರೆ. ಹೀಗಿರುವಾಗ ಮತದಾನ ತೀರಾ ಕನಿಷ್ಠಕ್ಕೆ ಕುಸಿತವಾಗಲಿದೆ. ಅಂದು ಜನರು ಮತದಾನಕ್ಕೆ ಮುಂದಾಗುವುದಿಲ್ಲ ಎಂಬುದು ಶೇಖಾವತ್ ಅವರ ಅಭಿಪ್ರಾಯವಾಗಿದೆ.