ಊಟಿ: ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿ.ಸೆ.ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ. ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಪಹಲ್ಗಾಂನಲ್ಲಿ -5.8 ಡಿ.ಸೆ., ಶ್ರೀನಗರ, ಗುಲ್ಮಾರ್ಗ್, ಕುಪ್ವಾರಾ ಮುಂತಾದೆಡೆ -4.5 ಡಿಗ್ರಿ ತಾಪಮಾನ ದಾಖಲಾಗಿದೆ. ಹಿಮಾಚಲದಲ್ಲಿ 5 ಸೆಂ.ಮೀಗೂ ದಪ್ಪನಾದ ಮಂಜು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ಹರ್ಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಜಾರ್ಖಂಡ್‌ನ ಹಲವು ನಗರಗಳಲ್ಲೂ ದಟ್ಟ ಮಂಜು ಆವರಿಸಿದೆ.
ಊಟಿಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಶೂನ್ಯದತ್ತ ತಾಪಮಾನ ಇಳಿದಿದೆ. ಉತ್ತರ ಭಾರತದಲ್ಲೂ ದಟ್ಟ ಮಂಜು ಆವರಿಸಿದೆ. ಈ ನಡುವೆ ದೆಹಲಿಯಲ್ಲಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಹಲವು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.