ಖರ್ಗೆ ಬಗ್ಗೆ ಆಕ್ಷೇಪಾರ್ಹ ನುಡಿ: ನಡ್ಡಾ ಕ್ಷಮೆಯಾಚನೆ

KannadaprabhaNewsNetwork |  
Published : Jul 30, 2025, 12:45 AM IST
ನಡ್ಡಾ  | Kannada Prabha

ಸಾರಾಂಶ

ಆಪರೇಷನ್‌ ಸಿಂದೂರ ವಿಚಾರವಾಗಿ ರಾಜ್ಯಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾ ನಾಯಕ ಜೆ.ಪಿ.ನಡ್ಡಾ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರ ನಡೆಯಿತು.

- ಮೋದಿ ವಿರುದ್ಧ ಟೀಕೆ ವೇಳೆ ತೀವ್ರ ಮಾತಿನ ಚಕಮಕಿ

ನವದೆಹಲಿ: ಆಪರೇಷನ್‌ ಸಿಂದೂರ ವಿಚಾರವಾಗಿ ರಾಜ್ಯಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾ ನಾಯಕ ಜೆ.ಪಿ.ನಡ್ಡಾ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರ ನಡೆಯಿತು. ಪ್ರಧಾನಿ ಮೋದಿ ಬಗ್ಗೆ ಖರ್ಗೆ ‘ಮಾನಸಿಕ ಸ್ಥಿಮಿತ’ ಕಳೆದುಕೊಂಡು ಮಾತನಾಡಿದ್ದಾರೆ ಎಂದು ಆರೋಪಿಸಿದ ನಡ್ಡಾ, ನಂತರ ತಮ್ಮ ಹೇಳಿಕೆಗೆ ಕ್ಷಮೆಯನ್ನೂ ಕೋರಿದರು.

ಖರ್ಗೆ ಮಾತು ಮುಗಿಸಿದ ಬಳಿಕ ಎದ್ದು ನಿಂತ ನಡ್ಡಾ, ‘ನೀವು ಪಕ್ಷದೊಂದಿಗೆ ಎಷ್ಟು ಬೆರೆತು ಬಿಟ್ಟಿದ್ದೀರೆಂದರೆ ನಿಮಗೆ ದೇಶದ ವಿಚಾರ ಗೌಣವಾಗಿ ಬಿಡುತ್ತದೆ. ಮಾತನಾಡುವಾಗ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತೀರಿ’ ಎಂದರು. ಇದಕ್ಕೆ ಖರ್ಗೆ ಹಾಗೂ ಪ್ರತಿಪಕ್ಷ ಸಂಸದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಖರ್ಗೆ ಮಾತನಾಡಿ, ‘ನಾನು ಗೌರವಿಸುವ ಎರಡ್ಮೂರು ಸಚಿವರಲ್ಲಿ ನಡ್ಡಾ ಕೂಡ ಒಬ್ಬರು. ಆದರೆ, ಅವರು ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿದ್ದಾರೆ. ಇದು ನಾಚಿಗೆಗೇಡಿನ ಸಂಗತಿ. ಅವರು ಇದಕ್ಕಾಗಿ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.

ಆಗ ನಡ್ಡಾ, ‘ಈಗಾಗಲೇ ನಾನು ಬಳಸಿದ ಪದ ವಾಪಸ್‌ ಪಡೆದಿದ್ದೇನೆ, ಈ ಕುರಿತು ಖರ್ಗೆ ಭಾವನೆಗೆ ನೋವಾಗಿದ್ದರೆ ಕ್ಷಮೆಯನ್ನೂ ಕೋರುತ್ತೇನೆ’ ಎಂದರು.

ಮೋದಿ ವಿಶ್ವದಲ್ಲೇ ಜನಪ್ರಿಯ ನಾಯಕರಲ್ಲೊಬ್ಬರು. ಅವರ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಮೋದಿ ವರ್ಚಸ್ಸು ಗಮನಿಸದೆ ಖರ್ಗೆ ಟೀಕಿಸಿದ್ದಾರೆ. ಖರ್ಗೆ ಅವರಿಗೆ ಸುದೀರ್ಘ ಅನುಭವವಿದೆ. ಅವರು ಬಳಸಿದ ಪದಗಳು ಅವರ ವಕ್ತಿತ್ವಕ್ಕೆ ಶೋಭೆ ತರಲ್ಲ. ಅವರ ಆ ಮಾತು ಕಡತದಿಂದ ತೆಗೆದುಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆಂದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ