ವಕ್ಫ್‌ ಜೆಪಿಸಿಗೆ ವಿಪಕ್ಷ ಸದಸ್ಯರು ಗುಡ್‌ಬೈ?

KannadaprabhaNewsNetwork |  
Published : Nov 05, 2024, 12:44 AM IST
ವಕ್ಫ್‌ ಬೋರ್ಡ್ | Kannada Prabha

ಸಾರಾಂಶ

ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಭಾಗವಾಗಿರುವ ವಿಪಕ್ಷಗಳ ಸದಸ್ಯರು, ಸಮಿತಿಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಭಾಗವಾಗಿರುವ ವಿಪಕ್ಷಗಳ ಸದಸ್ಯರು, ಸಮಿತಿಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌, ಸಮಿತಿ ನಡಾವಳಿ ಕುರಿತು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ವಿಪಕ್ಷ ಸದಸ್ಯರು, ಈ ಸಂಬಂಧ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಮಂಗಳವಾರ ಭೇಟಿ ಮಾಡಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

‘ಸಮಿತಿಯ ಸಭೆಗಳಿಗೆ ಪೂರ್ವ ಸಿದ್ಧತೆ ನಡೆಸಲು ಸಮಯ ನೀಡುತ್ತಿಲ್ಲ. ಎಲ್ಲಾ ನಿರ್ಧಾರಗಳನ್ನು ಪಾಲ್‌ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ಪರಸ್ಪರ ಸಂವಾದಕ್ಕೆ ಅವಕಾಶವೇ ಇಲ್ಲದಾಗಿದೆ. ಹೀಗಾಗಿ ನಾವು ಸಮಿತಿಯಿಂದ ದೂರ ಸರಿಯುವುದು ಅನಿವಾರ್ಯವಾಗಿದೆ’ ಎಂಬ ಅಂಶಗಳನ್ನು ಒಳಗೊಂಡ ಪತ್ರವೊಂದನ್ನು ಸೋಮವಾರ, ವಿಪಕ್ಷಗಳ ನಾಯಕರ ನಡುವೆ ಹಂಚಿಕೊಳ್ಳಲಾಗಿದೆ. ಇದೇ ಪತ್ರವನ್ನು ಮಂಗಳವಾರ ಓಂ ಬಿರ್ಲಾ ಅವರಿಗೆ ದೂರಿನ ಸ್ವರೂಪದಲ್ಲಿ ಸಲ್ಲಿಸಲೂ ನಿರ್ಧರಿಸಲಾಗಿದೆ.

==

ಕೇರಳ ವಕ್ಫ್‌ ಭೂಮಿ ವಿವಾದ: ಸರ್ವಪಕ್ಷ ಸಭೆಗೆ ವಿಪಕ್ಷ ಪಟ್ಟು

ತಿರುವನಂತಪುರಂ: ಎರ್ನಾಕುಲಂನ ಮುನಂಬಂ ಗ್ರಾಮಸ್ಥರ ಜಮೀನನ್ನು ತನ್ನ ಆಸ್ತಿ ಎಂದು ಹೇಳಿರುವ ವಕ್ಫ್‌ ಮಂಡಳಿ ವಿರುದ್ಧ ಜನರು ಪ್ರತಿಭಟನೆಗೆ ಇಳಿದಿರುವ ಬೆನ್ನಲ್ಲೇ, ಸಮಸ್ಯೆ ಬಗೆಹರಿಸಲು ಸರ್ವಪಕ್ಷಗಳ ಸಭೆ ಕರೆಯುವಂತೆ ಕೇರಳ ವಿಪಕ್ಷ ನಾಯಕ ವಿ.ಡಿ. ಸತೀಶನ್‌ ಅವರು ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಆಗ್ರಹಿಸಿದ್ದಾರೆ.ಈ ಸಂಬಂಧ ಪತ್ರ ಬರೆದಿರುವ ಅವರು, ‘ವಕ್ಫ್‌ ಮಂಡಳಿ 464 ಎಕರೆ ಜಮೀನನ್ನು ಹಿಂಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿರುವುದು 600ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಜಮೀನನ್ನು ಯಾವುದೇ ಮುಸ್ಲಿಂ ಸಂಘಟನೆಗಳು ತಮ್ಮದೆಂದು ಹೇಳಿಕೊಂಡಿಲ್ಲ. ಈ ಸಮಸ್ಯೆಯನ್ನು 10 ನಿಮಿಷದಲ್ಲೇ ಬಗೆಹರಿಸಬಹುದು’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ