ಜೈಶಂಕರ್‌ ಬದಲು ಮೋದಿ ಬಂದಿದ್ದರೆ ಚೆನ್ನಾಗಿತ್ತು : ಮಾಜಿ ಪ್ರಧಾನಿ ನವಾಜ್‌ ಶರೀಫ್‌

KannadaprabhaNewsNetwork |  
Published : Oct 18, 2024, 12:09 AM ISTUpdated : Oct 18, 2024, 06:56 AM IST
ಷರೀಫ್‌ | Kannada Prabha

ಸಾರಾಂಶ

ಪಾಕಿಸ್ತಾನದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭಾಗವಹಿಸಿದ ಬೆನ್ನಲ್ಲೇ ಪಾಕ್‌ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭಾಗವಹಿಸಿದ ಬೆನ್ನಲ್ಲೇ ಪಾಕ್‌ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಶರೀಫ್‌, ‘ಎರಡೂ ದೇಶಗಳು ಹಳೆಯದನ್ನು ಮರೆತು, ಶಕ್ತಿ, ಹವಾಮಾನ ಬದಲಾವಣೆಯಂತಹ ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಮನ ಹರಿಸಬೇಕು. ಈಗಾಗಲೇ 75 ವರ್ಷ ಕಳೆದುಹೋಗಿದ್ದು, ಇನ್ನೂ 75 ವರ್ಷಗಳನ್ನು ವ್ಯರ್ಥವಾಗಿ ಕಳೆಯುವುದು ಬೇಡ’ ಎಂದು ನಯವಾದ ಮಾತುಗಳನ್ನಾಡಿದ್ದಾರೆ.

ಜೊತೆಗೆ, ಶೃಂಗಕ್ಕೆ ಪ್ರಧಾನಿ ಮೋದಿಯವರು ಆಗಮಿಸಿದ್ದರೆ ಇನ್ನೂ ಒಳ್ಳೆಯದಿತ್ತು. ನೆರೆ ದೇಶಗಳನ್ನು ಬದಲಿಸಲಾಗದು. ಆದ್ದರಿಂದ ನೆರೆಹೊರೆಯವರೊಂದಿಗೆ ಒಳ್ಳೆ ರೀತಿಯಿಂದಿರಬೇಕು ಎಂದಿದ್ದಾರೆ.

ಅ.15 ಮತ್ತು 16ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ ಪರವಾಗಿ ಜೈಶಂಕರ್‌ ಭಾಗವಹಿಸಿದ್ದು, ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ಪರೋಕ್ಷವಾಗಿ ತಿವಿದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!