ಕೋಲ್ಕತಾ ಮೇಲೆ ದಾಳಿ ಮಾಡ್ತೇವೆ: ಪಾಕ್‌ ರಕ್ಷಣಾ ಸಚಿವ ಉದ್ಧಟತನ

KannadaprabhaNewsNetwork |  
Published : Apr 06, 2026, 03:15 AM IST
ಆಸಿಫ್‌ | Kannada Prabha

ಸಾರಾಂಶ

‘ಭಾರತವೇನಾದರೂ ನಮ್ಮ ವಿರುದ್ಧ ಸೇನಾಕ್ರಮ ಕೈಗೊಂಡರೆ ನಾವದಕ್ಕೆ ಪ್ರತಿಯಾಗಿ ಕೋಲ್ಕತಾದ ಮೇಲೆ ದಾಳಿ ಮಾಡುತ್ತೇವೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಬೆದರಿಕೆ ಒಡ್ಡಿದ್ದಾರೆ.

ರಾಜನಾಥ್‌ ಎಚ್ಚರಿಕೆಗೆ ಪ್ರತಿಯಾಗಿ ಬೆದರಿಕೆಮತ್ತೆ ಉಗ್ರದಾಳಿ ನಡೆಸಿದ್ರೆ ತಕ್ಕ ತಿರುಗೇಟು: ರಾಜನಾಥ್‌

ಪಹಲ್ಗಾಂ ದಾಳಿಗೆ ವರ್ಷವಾಗುತ್ತಿರುವ ಹಿನ್ನೆಲೆ ಎಚ್ಚರಿಕೆಇದಕ್ಕೆ ಪ್ರತಿಯಾಗಿ ಪಾಕ್‌ ಕಡೆಯಿಂದ ಪ್ರತಿಬೆದರಿಕೆಭಾರತ ಸುಳ್ಳು ಆಪರೇಷನ್‌ ನಡೆಸಬಹುದು: ಪಾಕ್‌ದೆಹಲಿ, ಮುಂಬೈ ಮೇಲೆ ದಾಳಿ ಎಂದಿದ್ದ ಮಾಜಿ ದೂತ

ನವದೆಹಲಿ: ‘ಭಾರತವೇನಾದರೂ ನಮ್ಮ ವಿರುದ್ಧ ಸೇನಾಕ್ರಮ ಕೈಗೊಂಡರೆ ನಾವದಕ್ಕೆ ಪ್ರತಿಯಾಗಿ ಕೋಲ್ಕತಾದ ಮೇಲೆ ದಾಳಿ ಮಾಡುತ್ತೇವೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಬೆದರಿಕೆ ಒಡ್ಡಿದ್ದಾರೆ.

‘ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್‌ ಉಗ್ರರು ನಡೆಸಿದ 26 ಅಮಾಯಕರ ಕಗ್ಗೊಲೆಗೆ ಏ.22ರಂದು1 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತೇನಾದರೂ ಕುತಂತ್ರ ಮಾಡಲು ಮುಂದಾದರೆ, ಇನ್ನೂ ಮುಗಿಯದ ಆಪರೇಷನ್‌ ಸಿಂದೂರದ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಲಾಗುವುದು’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಳೆದ ವಾರ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಖ್ವಾಜಾ, ‘ಭಾರತವೇನಾದರೂ ನಮ್ಮ ಮೇಲೆ ಸುಳ್ಳು ಕಾರ್ಯಾಚರಣೆ (ಪಾಕ್‌ ದಾಳಿ ನಡೆಸಿದೆಯೆಂದು ಸುಳ್ಳು ಹೇಳಿ ಆಪರೇಷನ್‌) ಮಾಡಬಹುದು. ಅವರೇ ಕೆಲ ದೇಹಗಳನ್ನು ತಂದಿಟ್ಟು ಉಗ್ರವಾದ ನಡೆಸಲಾಗಿದೆ ಎಂಬಂತೆ ಬಿಂಬಿಸಬಹುದು. ಹಾಗೇನಾದರು ಮಾಡಿದರೆ ನಾವು ಕೋಲ್ಕತಾವನ್ನು ಗುರಿಯಾಗಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಭಾರತವಿನ್ನೂ ಪ್ರತ್ಯುತ್ತರ ನೀಡಿಲ್ಲ.ಕಳೆದ ತಿಂಗಳಷ್ಟೇ, ಭಾರತಕ್ಕೆ ಪಾಕ್‌ ರಾಯಭಾರಿಯಾಗಿದ್ದ ಅಬ್ದುಲ್ ಬಾಸಿತ್, ‘ಒಂದೊಮ್ಮೆ ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ನಾವು ದೆಹಲಿ ಮತ್ತು ಮುಂಬೈ ಮೇಲೆ ಆಕ್ರಮಣ ಮಾಡುತ್ತೇವೆ’ ಎಂದು ಹೇಳಿದ್ದರು. ಈ ಹೇಳಿಕೆಗಳ ಸರಣಿಯನ್ನು ನೋಡಿದರೆ, ಪಾಕ್‌ ಮತ್ತೊಮ್ಮೆ ಭಾರತದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಂಚು ರೂಪಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕ ತಯಾರಿ?
ಭಾರತದಲ್ಲಿ ಜಿಹಾದ್‌ ನಡೆಸುತ್ತಿದ್ದ ಐಸಿಸ್‌ ನಂಟಿನ ಉಗ್ರಜಾಲ ಬಯಲು