ತನ್ನದೇ ಸೈನಿಕರ ಸಾಯಲು ಬಿಟ್ಟ ದ್ರೋಹಿ ಪಾಕಿಸ್ತಾನ!

Published : Feb 21, 2026, 07:08 AM IST
Pakistan Army

ಸಾರಾಂಶ

ದೇಶದ ರಕ್ಷಣೆಗೆ ಪ್ರಾಣವನ್ನೇ ಒತ್ತೆಯಿಟ್ಟ ತನ್ನ 8 ಸೈನಿಕರನ್ನು ‘ನಮ್ಮವರಲ್ಲ’ ಎನ್ನುವ ಮೂಲಕ ಪಾಕಿಸ್ತಾನ ಸರ್ಕಾರ ಅವರನ್ನು ಬಲೂಚಿಗಳ ಕೈಯ್ಯಲ್ಲಿ ಸಾಯಲು ಬಿಟ್ಟಿದೆ. ಇದರೊಂದಿಗೆ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಇಸ್ಲಾಮಾಬಾದ್‌: ದೇಶದ ರಕ್ಷಣೆಗೆ ಪ್ರಾಣವನ್ನೇ ಒತ್ತೆಯಿಟ್ಟ ತನ್ನ 8 ಸೈನಿಕರನ್ನು ‘ನಮ್ಮವರಲ್ಲ’ ಎನ್ನುವ ಮೂಲಕ ಪಾಕಿಸ್ತಾನ ಸರ್ಕಾರ ಅವರನ್ನು ಬಲೂಚಿಗಳ ಕೈಯ್ಯಲ್ಲಿ ಸಾಯಲು ಬಿಟ್ಟಿದೆ. ಇದರೊಂದಿಗೆ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿರುವ ಬಲೂಚಿಗಳು ಮತ್ತು ಪಾಕ್‌ ಸೇನೆ ನಡುವೆ ಕಳೆದೊಂದು ವರ್ಷದಿಂದ ಭೀಕರ ಕಾಳಗ ನಡೆಯುತ್ತಿದೆ. ಈ ನಡುವೆ ಇತ್ತೀಚೆಗೆ ಪಾಕ್‌ನ 8 ಯೋಧರನ್ನು ಒತ್ತೆ ಇಟ್ಟುಕೊಂಡಿದ್ದ ಬಲೂಚಿ ಹೋರಾಟಗಾರರು, ಅವರನ್ನು ಬಿಡುಗಡೆ ಮಾಡಬೇಕಿದ್ದಲ್ಲಿ ಪಾಕ್‌ ವಶದಲ್ಲಿರುವ ತಮ್ಮ ಹೋರಾಟಗಾರರ ಬಿಡುಗಡೆ ಮಾಡಬೇಕು ಎಂದು ಷರತ್ತು ಒಡ್ಡಿದ್ದಾರೆ. ಒಂದು ವೇಳೆ ಫೆ.22ರೊಳಗೆ ಬಲೂಚ್‌ ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದಲ್ಲಿ, ವಶದಲ್ಲಿರುವ ಎಲ್ಲಾ ಯೋಧರನ್ನು ಮರಣದಂಡನೆಗೆ ಗುರಿಮಾಡುವುದಾಗಿ ಎಚ್ಚರಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅವಮಾನ ಆಗುತ್ತದೆ ಎನ್ನುವ ಕಾರಣ

ಆದರೆ ತಮ್ಮ ಯೋಧರು ಒತ್ತೆ ಸಿಕ್ಕಿದ್ದಾರೆ ಎಂದು ಒಪ್ಪಿಕೊಂಡರೆ ಜಾಗತಿಕ ಮಟ್ಟದಲ್ಲಿ ಅವಮಾನ ಆಗುತ್ತದೆ ಎನ್ನುವ ಕಾರಣಕ್ಕಾಗಿ, ನಮ್ಮ ಯಾವುದೇ ಯೋಧರು ಸೆರೆ ಸಿಕ್ಕಿಲ್ಲ ಎಂದು ಪಾಕ್‌ ಸೇನೆ ಬಡಾಯಿ ಕೊಚ್ಚಿಕೊಂಡಿತ್ತು. ಅದರ ಬೆನ್ನಲ್ಲೇ ತಮ್ಮ ವಶದಲ್ಲಿರುವ ಸಮವಸ್ತ್ರದಲ್ಲಿರುವ 8 ಪಾಕ್‌ ಯೋಧರ ವಿಡಿಯೋಗಳನ್ನು ಬಲೂಚಿಗಳು ಬಿಡುಗಡೆ ಮಾಡಿದ್ದಾರೆ.

ನಾನು ನಿಮ್ಮವರಲ್ಲ ಎಂದರೆ ಮತ್ಯಾರು?

ಬಿಎಲ್‌ಎಯ ಮಾಧ್ಯಮ ವಿಭಾಗ ಹಕ್ಕಲ್‌ ಹಂಚಿಕೊಂಡಿರುವ ವಿಡಿಯೋದಲ್ಲಿ 8 ಸೈನಿಕರು ತಮ್ಮ ಸ್ವಂತ ಮತ್ತು ರಾಷ್ಟ್ರೀಯ ಗುರುತಿನ ದಾಖಲೆಗಳನ್ನು ಕ್ಯಾಮೆರಾಗೆ ತೋರಿಸುತ್ತಾ, ‘ನಾವು ಪಾಕ್‌ ಯೋಧರಲ್ಲ ಎಂದು ಸೇನೆ ಹೇಗೆ ಹೇಳಲು ಸಾಧ್ಯ? ಇದು ಪಾಕ್‌ ಸರ್ಕಾರವಲ್ಲದೆ ಯಾರು ಕೊಟ್ಟಿರುವ ಗುರುತಿನ ಚೀಟಿ? ನಾವು ನಿಮ್ಮವರಲ್ಲ ಎಂದು ಹೇಳುವುದೇ ಆಗಿದ್ದರೆ ಸೇನೆಗೇಕೆ ಸೇರಿಸಿಕೊಂಡಿರಿ?’ ಎಂದು ತಮ್ಮ ಸರ್ಕಾರ ಮತ್ತು ಸೇನೆಯನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶಾಲೇಲಿ ಬ್ಲೇಡಿಂದ ಒಂದೇ ರೀತಿ ಕೈ ಕೊಯ್ದುಕೊಂಡ 35 ಮಕ್ಕಳು!
ಎಐನಿಂದ ವಿಶ್ವದಲ್ಲಿ 9 ಕೋಟಿ ನೌಕರಿಗೆ ಕುತ್ತು : ನಿಲೇಕಣಿ