ದೇಶ ರಕ್ಷಿಸಿ : ಪಾಕ್ ಸಂಸತ್ತಲ್ಲಿ ಸಂಸದನ ಕಣ್ಣೀರು

KannadaprabhaNewsNetwork |  
Published : May 09, 2025, 12:32 AM ISTUpdated : May 09, 2025, 03:28 AM IST
ಸಂಸದ  | Kannada Prabha

ಸಾರಾಂಶ

ಭಾರತದ ಆಪರೇಷನ್‌ ಸಿಂದೂರ ದಾಳಿಗೆ ಪಾಕಿಸ್ತಾನ ಥರಗುಟ್ಟಿ ಹೋದಂತಿದೆ. ಸಂಸದರೊಬ್ಬರು ಪಾಕ್‌ ಸಂಸತ್ತಿನಲ್ಲಿ ‘ದೇಶವನ್ನು ರಕ್ಷಿಸಿ’ ಎಂದು ಕಣ್ಣೀರು ಹಾಕಿ ಮನವಿ ಮಾಡಿದ್ದಾರೆ.

ಇಸ್ಲಾಮಾಬಾದ್‌: ಭಾರತದ ಆಪರೇಷನ್‌ ಸಿಂದೂರ ದಾಳಿಗೆ ಪಾಕಿಸ್ತಾನ ಥರಗುಟ್ಟಿ ಹೋದಂತಿದೆ. ಸಂಸದರೊಬ್ಬರು ಪಾಕ್‌ ಸಂಸತ್ತಿನಲ್ಲಿ ‘ದೇಶವನ್ನು ರಕ್ಷಿಸಿ’ ಎಂದು ಕಣ್ಣೀರು ಹಾಕಿ ಮನವಿ ಮಾಡಿದ್ದಾರೆ.

 ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್) ಸದಸ್ಯ ತಹೀರ್ ಇಕ್ಬಾಲ್‌ ಅವರು ಗುರುವಾರ ಭಾರತ ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಮಾತನಾಡುತ್ತ ಕಣ್ಣೀರು ಹಾಕಿದರು.‘ದೇವರೇ, ದಯವಿಟ್ಟು ಈ ದೇಶವನ್ನು ಸುರಕ್ಷಿತವಾಗಿ ಇರಿಸು’ ಎಂದು ಮನವಿ ಮಾಡಿದರು. ಮೋಜಿನ ಸಂಗತಿಯೆಂದರೆ ಅವರು ಪಾಕಿಸ್ತಾನದ ಮಾಜಿ ಸೇನಾ ಅಧಿಕಾರಿ ಆಗಿದ್ದಾರೆ.

ಮೌಲಾನಾ ನೆಂಟರ ನಿಧನಕ್ಕೆ ತಾಲಿಬಾನ್ ಸಂತಾಪ

ಪೇಶಾವರ: ಜೈಶ್ರೆ ಮುಹಮ್ಮದ್ ಮುಖ್ಯಸ್ಥ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಹತ್ಯೆಗೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂತಾಪ ಸೂಚಿಸಿದೆ, ಪಾಕಿಸ್ತಾನ ಸೇನೆಯು ಎಲ್ಲಾ 9 ಗುರಿಗಳನ್ನು ಮಾಹಿತಿಯನ್ನು ಭಾರತಕ್ಕೆ ಸೋರಿಕೆ ಮಾಡಿತ್ತು. ಅದಕ್ಕೇ ಈ ದಾಳಿ ನಡೆದಿದೆ ಎಂದು ಆರೋಪಿಸಿದೆ.

ಶಿಕ್ಷೆ ಪ್ರಶ್ನಿಸಿ ಪಾಕ್‌ ಉಗ್ರ ಹಫೀಜ್‌ ಪಾಕ್‌ ಕೋರ್ಟ್‌ಗೆ ಅರ್ಜಿ

ಲಾಹೋರ್: 2008ರ ಮುಂಬೈ ದಾಳಿ ರೂವಾರಿಯಾದ ನಿಷೇಧಿತ ಜಮಾತ್‌-ಉದ್‌-ದಾವಾ ಉಗ್ರಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌, ತನಗೆ ವಿಧಿಸಲಾದ ಹಲವು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಲಾಹೋರ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘ಸೈದ್‌ ಹಾಗೂ ಆತನ ಸಂಘಟನೆಯ ಕೆಲ ನಾಯಕರು, ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣಗಳಲ್ಲಿ ವಿಧಿಸಲಾದ ಹಲವು ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಲಾಹೋರ್‌ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ದ್ವಿಸದಸ್ಯ ಪೀಠ ನಡೆಸಲಿದ್ದು, ದಿನಾಂಕವನ್ನು ನಿಗದಿಪಡಿಸಲಾಗಿಲ್ಲ’ ಎಂದು ಅವರು ಹೇಳಿದ್ದಾರೆ.ಉಗ್ರವಾದಕ್ಕೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಸೈದ್‌ನನ್ನು 2019ರಲ್ಲಿ ಬಂಧಿಸಲಾಗಿತ್ತು.ಪಾಕ್ ಷೇರುಪೇಟೆ ಶೇ.6ರಷ್ಟು ಕುಸಿತ: ವಹಿವಾಟು ಸ್ತಬ್ಧ

ಕರಾಚಿ: ಪಾಕಿಸ್ತಾನದ ಕರಾಚಿ ಬಳಿ ಭಾರತವು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತಿದೆ ಎನ್ನುವ ವದಂತಿಯಿಂದಾಗಿ ಪಾಕ್‌ ಷೇರುಪೇಟೆ ಭಾರೀ ಕುಸಿತ ಕಂಡಿದ್ದು. ಗುರುವಾರ ಒಂದೇ ದಿನ ಶೇ.6ರಷ್ಟು ಇಳಿಕೆಯಾಗಿದೆ. ಈ ನಡುವೆ ಷೇರು ವಹಿವಾಟು ಒಂದು ಗಂಟೆ ಸ್ಥಗಿತಗೊಂಡಿತುಭಾರತದ ದಾಳಿ ನಡೆಸಿರುವ ವದಂತಿಗಳು ಆಧಾರ ರಹಿತವಾಗಿದ್ದರೂ, ಪಾಕ್ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಒಂದು ಗಂಟೆ ವಹಿವಾಟು ಸ್ಥಗಿತಕ್ಕೂ ಮುನ್ನ ಕೆಎಸ್‌ಇ100 ಸೂಚ್ಯಂಕವು ಗುರುವಾರ 6948.73 ಅಂಕಗಳಷ್ಟು ಕುಸಿತ ಕಂಡು 1,03,060ರಲ್ಲಿ ಮುಕ್ತಾಯಗೊಂಡಿತು. ಅ ನಂತರ ಷೇರುಪೇಟೆ ಶಾಂತಗೊಂಡ ಬಳಿಕ ಮತ್ತೆ ವಹಿವಾಟು ಪುನಾರಂಭಗೊಂಡಿತು.

ಭಾರತದ ಷೇರುಪೇಟೆ ಕೂಡ 412 ಅಂಕ ಇಳಿಕೆಮುಂಬೈ: ಭಾರತ-ಪಾಕ್‌ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆಗಳು ಕುಸಿದಿವೆ. ಸೆನ್ಸೆಕ್ಸ್ 412 ಅಂಕ ಇಳಿದು 80,334.81ಕ್ಕೆ ಸ್ಥಿರಗೊಂಡಿದೆ. ನಿಫ್ಟಿ 140.60 ಅಂಕ ಇಳಿದು24,273.80ಕ್ಕೆ ಸ್ಥಿರವಾಗಿದೆ.

ನಾಳೆಯಿಂದ ಹೈದರಾಬಾದ್‌ನಲ್ಲಿ ವಿಶ್ವ ಸುಂದರಿ ಸ್ಪರ್ಧೆ

ಹೈದರಾಬಾದ್‌: ವಿಶ್ವ ಸುಂದರಿಯರ ಸ್ಪರ್ಧೆ ಮಿಸ್‌ ವರ್ಲ್ಡ್‌ ಮೇ 10ರಿಂದ ಹೈದರಾಬಾದಲ್ಲಿ ನಡೆಯಲಿದೆ.ಈ ವರ್ಷ ಭಾರತವನ್ನು ರಾಜಸ್ಥಾನದ ನಂದಿನಿ ಗುಪ್ತಾ ಎಂಬುವರು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷ ಸ್ಪರ್ಧೆ ಮುಂಬೈನಲ್ಲಿ ನಡೆದಿತ್ತು. ಈ ಮೂಲಕ ಬ್ರಿಟನ್‌ ನಂತರದಲ್ಲಿ ಸತತ 2 ವರ್ಷ ಒಂದೇ ದೇಶದಲ್ಲಿ ಸ್ಪರ್ಧೆ ಆಯೋಜನೆಗೊಂಡಿರುವ ಖ್ಯಾತಿಗೆ ಭಾರತ ಪಾತ್ರವಾಗಿದೆ.

1951ರಲ್ಲಿ ಆರಂಭವಾದ ಮಿಸ್‌ ವರ್ಲ್ಡ್ 1996ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟಿತ್ತು. ಅಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು.

ಭಾರತದಿಂದ ಈವರೆಗೆ ರೀತಾ ಫಾರಿಯಾ (1966), ಐಶ್ವರ್ಯ ರೈ (1994), ಡಯಾನಾ ಹೈಡೆನ್‌ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಮಾನುಷಿ ಛಿಲ್ಲರ್‌ (2017) ಕಿರೀಟವನ್ನು ಗಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ