- ಅಮೆರಿಕ- ಇರಾನ್ ಯುದ್ಧ ನಿಲ್ಲಿಸುವ ಸಂಬಂಧ ಮಧ್ಯಸ್ಥಿಕೆ ಪಾತ್ರ ನಿರ್ವಹಿಸುತ್ತಿರುವ ಪಾಕಿಸ್ತಾನ- ಮಧ್ಯಸ್ಥಿಕೆದಾರರು ತಟಸ್ಥವಾಗಿರಬೇಕು ಎಂಬ ನಂಬಿಕೆಗೇ ಎಳ್ಳು ನೀರು ಬಿಟ್ಟಿರುವ ನೆರೆಯ ದೇಶ- ಅಮೆರಿಕ ದಾಳಿ ವೇಳೆ ಇರಾನ್ ವಿಮಾನಗಳಿಗೆ ಪಾಕ್ ಆಶ್ರಯ. ಈಗ ಸೌದಿಗೆ ಸೇನಾ ಪಡೆ ರವಾನೆ- ಅಮೆರಿಕದ ದಾಳಿಗೆ ಪ್ರತಿಯಾಗಿ ಸೌದಿ ಅರೇಬಿಯಾ ಮೇಲೆ ಕ್ಷಿಪಣಿಗಳ ಮಳೆ ಸುರಿಸಿದ್ದ ಇರಾನ್- ಈಗ ಸೌದಿ ನೆರವಿಗೆ ಪಾಕ್. ಒಪ್ಪಂದವಿದೆ ಎಂದು ನೆಪ. ಯುದ್ಧ ನಡೆವಾಗ ಎಲ್ಲಿತ್ತು ಈ ಡೀಲ್?: ಚರ್ಚೆ
ಎರಡೂ ದೇಶಗಳ ನಡುವೆ ಸಂಧಾನದ ಹೊಣೆ ಹೊತ್ತಿರುವ ಪಾಕಿಸ್ತಾನ, ಯುದ್ಧದ ವೇಳೆ ಇರಾನ್‌ನ ಹಲವು ವಿಮಾನಗಳನ್ನು ತನ್ನ ಸೇನಾ ನೆಲೆಗಳಲ್ಲಿ ರಹಸ್ಯವಾಗಿ ನಿಲ್ಲಿಸಲು ಅವಕಾಶ ಕಲ್ಪಿಸಿತ್ತು ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅಮೆರಿಕ ಸೆರೆ ಹಿಡಿದ ಉಪಗ್ರಹ ಚಿತ್ರಗಳಲ್ಲಿ ಪಾಕಿಸ್ತಾನದ ಈ ವಂಚನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಮೆರಿಕ ಕೂಡ ಪ್ರತಿಕ್ರಿಯೆ ನೀಡಿತ್ತು.
ಅದರ ಬೆನ್ನಲ್ಲೇ, ಇರಾನ್‌ನಿಂದ ಸತತ ದಾಳಿಗೆ ತುತ್ತಾಗುತ್ತಿರುವ ಅಮೆರಿಕ ಮಿತ್ರರಾಷ್ಟ್ರ ಸೌದಿ ಅರೇಬಿಯಾಕ್ಕೆ ದೊಡ್ಡ ಸೇನಾ ಬಲವನ್ನು ಕಳಿಸುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.ರಾಯಿಟರ್ಸ್ ವರದಿ ಪ್ರಕಾರ, ಪಾಕಿಸ್ತಾನವು ಸೌದಿಗೆ ಸುಮಾರು 8,000 ಸೈನಿಕರು, 16 ಜೆಎಫ್-17 ಫೈಟರ್ ಜೆಟ್‌ಗಳು, ಡ್ರೋನ್‌ಗಳು ಮತ್ತು ಚೀನಾದ ಎಚ್‌ಕ್ಯು-9 ವಾಯುರಕ್ಷಣಾ ವ್ಯವಸ್ಥೆಯನ್ನು ಕಳಿಸಿಕೊಟ್ಟಿದೆ. ಪಾಕ್-ಸೌದಿ ನಡುವಿನ ಕಳೆದ ವರ್ಷದ ರಕ್ಷಣಾ ಒಪ್ಪಂದದಡಿ ಈ ನಿಯೋಜನೆ ನಡೆದಿದೆ. ಪಾಕಿಸ್ತಾನ ಒಂದೆಡೆ ಶಾಂತಿ ಸಂಧಾನಕಾರನಂತೆ ವರ್ತಿಸುತ್ತಿದ್ದರೆ, ಇನ್ನೊಂದೆಡೆ ಸೌದಿ ಪರವಾಗಿ ಬಲ ಪ್ರದರ್ಶಿಸುತ್ತಿದೆ. ಇದು ಇರಾನ್‌ನ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.