ಭಾರತದಲ್ಲಿ ಸ್ಫೋಟಿಸಲು ಪಾಕ್‌ ಉಲ್ಟಾ ಹನಿಟ್ರ್ಯಾಪ್‌

Published : Nov 16, 2026, 05:46 AM IST
Honey Trap

ಸಾರಾಂಶ

ಸಾಮಾನ್ಯವಾಗಿ ಪಾಕಿಸ್ತಾನವು ತನ್ನ ಮಹಿಳೆಯರನ್ನು ಬಳಸಿಕೊಂಡು ಭಾರತದಲ್ಲಿನ ರಹಸ್ಯ ಮಾಹಿತಿಯನ್ನು ಪಡೆಯಲು ಪುರುಷರನ್ನು ಹನಿಟ್ರ್ಯಾಪ್‌ಗೆ ಕೆಡವುದುಂಟು.ಆಮಿಷಕ್ಕೆ ಕೆಡವಿ ಆಕೆಯ ಮೂಲಕ ರಾಜಸ್ಥಾನದ ಶ್ರೀಗಂಗಾನಗರ ರೈಲ್ವೆ ಹಳಿ ಸ್ಫೋಟಿಸಿದ ವಿಚಾರ ಬೆಳಕಿಗೆ ಬಂದಿದೆ.

ಜೈಪುರ : ಸಾಮಾನ್ಯವಾಗಿ ಪಾಕಿಸ್ತಾನವು ತನ್ನ ಮಹಿಳೆಯರನ್ನು ಬಳಸಿಕೊಂಡು ಭಾರತದಲ್ಲಿನ ರಹಸ್ಯ ಮಾಹಿತಿಯನ್ನು ಪಡೆಯಲು ಪುರುಷರನ್ನು ಹನಿಟ್ರ್ಯಾಪ್‌ಗೆ ಕೆಡವುದುಂಟು. ಆದರೆ ಇದೀಗ ಪಾಕಿಸ್ತಾನದ ಪುರುಷ ಹ್ಯಾಂಡ್ಲರ್‌ ಒಬ್ಬ, ಭಾರತದ ಮಹಿಳೆಯನ್ನು ಪ್ರೀತಿಯ ಆಮಿಷಕ್ಕೆ ಕೆಡವಿ ಆಕೆಯ ಮೂಲಕ ರಾಜಸ್ಥಾನದ ಶ್ರೀಗಂಗಾನಗರ ರೈಲ್ವೆ ಹಳಿ ಸ್ಫೋಟಿಸಿದ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ಪ್ರೀತಿಯ ಆಮಿಷಕ್ಕೆ ಸಿಲುಕಿದ್ದ ಯುವತಿ ಸೇರಿದಂತೆ ಇಬ್ಬರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ.

ನ.3ರಂದು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್‌ಗಢ್-ಸೂರತ್‌ಗಢ್ ನಡುವಿನ ರೈಲ್ವೆ ಹಳಿಯನ್ನು ಸ್ಫೋಟಿಸಲಾಗಿತ್ತು. ಇದರ ಪ್ರಮುಖ ರೂವಾರಿ ಪಾಕ್‌ನ ಐಎಸ್‌ಐ ಹ್ಯಾಂಡ್ಲರ್‌ ಶಾಹ್‌ ಎಂಬಾತ ಮಹಕ್‌ದೀಪ್‌ ಕೌರ್‌ (21) ಎಂಬ ಭಾರತೀಯ ಮಹಿಳೆಯ ಜತೆ ಸಂಬಂಧ ಬೆಳೆಸಿ, ಆಕೆಯನ್ನು ಸ್ಫೋಟಕ್ಕೆ ಬಳಸಿಕೊಂಡಿದ್ದ. ಈ ಕೆಲಸ ಮಾಡಲು ಆರೋಪಿಗಳಿಗೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಕಡೆಯಿಂದ 2.23 ಲಕ್ಷ ರು. ನೀಡಲಾಗಿತ್ತು ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕೌರ್ (21) ಹಾಗೂ ದೇವಿಂದರ್‌ ಸಿಂಗ್‌ನನ್ನು (24) ಪಂಜಾಬ್‌ನ ಗುರುದಾಸಪುರದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ವಿದೇಶಿ ನಿರ್ಮಿತ 2 ಪಿಸ್ತೂಲ್‌ಗಳು, 46 ಜೀವಂತ ಗುಂಡುಗಳು ಮತ್ತು 30,000 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಏನಿದು ಪ್ರಕರಣ?:

ಆರೋಪಿ ಕೌರ್ ಸುಮಾರು 2 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಆದರೆ ವೈವಾಹಿಕ ಜೀವನ 2024ರ ಡಿಸೆಂಬರ್‌ನಲ್ಲಿ ಕೊನೆಗೊಂಡಿತು. ನಂತರ ಆಕೆಯ ಪತಿ ಕರಣ್‌ವೀರ್ ಸಿಂಗ್ ಡ್ರಗ್ಸ್‌ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಆದರೆ ಮತ್ತೆ ಕೌರ್‌ಳನ್ನು ಸಂಪರ್ಕಿಸಿ, ಪಾಕಿಸ್ತಾನ ಮೂಲದ ಲವ್ಲಿ ಎಂಬ ವ್ಯಕ್ತಿಯೊಂದಿಗೆ ಮಾತನಾಡಲು ಸೂಚಿಸಿದ್ದ. ಈ ವ್ಯಕ್ತಿ ಹಣ ನೀಡಲಿದ್ದು, ಅದನ್ನು ಜೈಲಿನಲ್ಲಿರುವ ತನಗೆ ತಲುಪಿಸುವಂತೆ ಕೇಳಿಕೊಂಡಿದ್ದ.

ಕೌರ್ ಮತ್ತು ಶಾಹ್ ನಡುವೆ ಪ್ರೇಮ

ನಂತರ ಲವ್ಲಿ ಆಕೆಯನ್ನು ಶಾಹ್ ಎಂಬ ವ್ಯಕ್ತಿಗೆ ಪರಿಚಯ ಮಾಡಿಕೊಟ್ಟ. ಕ್ರಮೇಣ, ಕೌರ್ ಮತ್ತು ಶಾಹ್ ನಡುವೆ ಪ್ರೇಮ ಬೆಳೆಯಿತು. ಪಾಕಿಸ್ತಾನಿ ಹ್ಯಾಂಡ್ಲರ್ ಆಗಿದ್ದ ಶಾಹ್‌ ಈ ಸಂಬಂಧವನ್ನು ಬಳಸಿಕೊಂಡು, ರೈಲು ಹಳಿ ಸ್ಫೋಟಕ್ಕಾಗಿ ಆಕೆಯನ್ನು ನೇಮಿಸಿಕೊಂಡ. ಅ.6ರಂದೇ ಸ್ಫೋಟ ನಡೆಸಲು ಯೋಜಿಸಿದ್ದ ಆರೋಪಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ ಬಾಂಬ್‌ಗಳು ಲಭ್ಯವಿಲ್ಲದ ಕಾರಣ ಮುಂದೂಡಿದ್ದರು. ಅ.12-13ಕ್ಕೆ ಸ್ಫೋಟ ಯತ್ನ ನಡೆಸಿದರೂ ತಾಂತ್ರಿಕ ಕಾರಣದಿಂದ ಸಾಧ್ಯ ಆಗಲಿಲ್ಲ. ಕೊನೆಗೆ ನ.3ರಂದು ಟೈಮರ್ ಬಳಸಿ ಹಳಿ ಸ್ಫೋಟಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಾಳೆ ಸೈಕ್ಲೋನ್‌ ದಾಳಿ : ಕಟ್ಟೆಚ್ಚರ- ನ.17ರಿಂದ 5 ದಿನ ಭಾರಿ ಮಳೆ ಸಂಭವ
₹ 15 ಕೋಟಿ ಚಿನ್ನ ಕದ್ದ ಯುಟ್ಯೂಬರ್ಸ್‌! ತನಿಷ್ಕ್‌ ಮಳಿಗೆಯಲ್ಲಿ ಕೃತ್ಯ