ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಕ್ವನ್‌’ ಚಂಡಮಾರುತ ಮಂಗಳವಾರ ತೀವ್ರ ಸ್ವರೂಪ ಪಡೆಯಲಿದ್ದು, ಪ.ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡು ಕರಾವಳಿಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ಕೋಲ್ಕತಾ : ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಕ್ವನ್‌’ ಚಂಡಮಾರುತ ಮಂಗಳವಾರ ತೀವ್ರ ಸ್ವರೂಪ ಪಡೆಯಲಿದ್ದು, ಪ.ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡು ಕರಾವಳಿಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ಇದು ನ.17ರಿಂದ ನ.19ರ ಅವಧಿಯಲ್ಲಿ ತೀವ್ರ ಸ್ವರೂಪ ಪಡೆದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ಭಾನುವಾರವೇ ಮಳೆ

ವಾಯುಭಾರ ಕುಸಿತದಿಂದಾಗಿ ಭಾನುವಾರವೇ ತಮಿಳುನಾಡಿನ ಚೆಂಗಲ್ಪಟ್ಟು, ಚೆನ್ನೈ, ಕಾಂಚೀಪುರಂ, ಕನ್ಯಾಕುಮಾರಿ ಮೊದಲಾದೆಡೆ ಮಳೆ ಸುರಿಯುತ್ತಿದೆ. ಆಂಧ್ರ, ಒಡಿಶಾ, ಬಂಗಾಳದಲ್ಲೂ ಇದೇ ವಾತಾವರಣ ಇದೆ.

ಆಗ್ನೇಯ ಮತ್ತು ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ

ಬಂಗಾಳಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು, ನ,16ರ ಸಂಜೆಯ ವೇಳೆಗೆ ‘ಚಂಡಮಾರುತ’ವಾಗಿ ಬದಲಾಗುವ ಸಾಧ್ಯತೆಯಿದೆ. ನ.17ರಂದು ‘ತೀವ್ರ ಚಂಡಮಾರುತ’ವಾಗಿ ಮತ್ತು. ನ.19ರ ವೇಳೆಗೆ ‘ಅತಿ ತೀವ್ರ ಚಂಡಮಾರುತ’ವಾಗಿ ಬಲಗೊಳ್ಳುವ ಮುನ್ಸೂಚನೆ ಇದೆ. ಆಂಧ್ರ ಕರಾವಳಿಗೆ ಇದು 19ರ ಸುಮಾರಿಗೆ ಅಪ್ಪಳಿಸುವ ಸಾಧ್ಯತೆ ಇದೆ. ನ,19ರಿಂದ 21ರವರೆಗೆ ಮಳೆ ತೀವ್ರ ಸ್ವರೂಪಿಯಾಗಿರಲಿದೆ ಎಂದು ಹವಾಮಾನ ಮೂಲಗಳು ಹೇಳಿವೆ.