ಸ್ವದೇಶ ತೊರೆದು ಕಳೆದ 2 ವರ್ಷಗಳಿಂದ ಭಾರತದಲ್ಲಿರುವ ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್‌ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಲು ಭಾರತದ ಒಲವು ತೋರಿದ್ದು ಅದಕ್ಕಾಗಿ ಎರಡು ಷರತ್ತುಗಳನ್ನು ವಿಧಿಸಿದೆ.

ನವದೆಹಲಿ: ಸ್ವದೇಶ ತೊರೆದು ಕಳೆದ 2 ವರ್ಷಗಳಿಂದ ಭಾರತದಲ್ಲಿರುವ ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್‌ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಲು ಭಾರತದ ಒಲವು ತೋರಿದ್ದು ಅದಕ್ಕಾಗಿ ಎರಡು ಷರತ್ತುಗಳನ್ನು ವಿಧಿಸಿದೆ.

ಮರಳಿ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಬಾಂಗ್ಲಾ ಸೇನೆಗೆ

ಮೊದಲನೆಯದಾಗಿ ಶೇಖ್‌ ಹಸೀನಾರನ್ನು ಮರಳಿ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಬಾಂಗ್ಲಾ ಸೇನೆಯು ತೆಗೆದುಕೊಳ್ಳಬೇಕು. ಅದಕ್ಕಾಗಿ ಮಿಲಿಟರಿ ವಾಹನಗಳನ್ನು ಬಳಸಬೇಕು ಎಂದಿದೆ.

ಢಾಕಾ ನ್ಯಾಯಾಲಯ ವಿಧಿಸಿರುವ ಹಸೀನಾ ಮರಣದಂಡನೆ

ಇದರ ಜತೆಗೆ ಈಗಾಗಲೇ ಢಾಕಾ ನ್ಯಾಯಾಲಯ ವಿಧಿಸಿರುವ ಹಸೀನಾ ಮರಣದಂಡನೆ ವಿರುದ್ಧ ಮೇಲ್ಮನವಿಗೆ ಅವಕಾಶ ನೀಡಬೇಕು. ಹೊಸ ವಿಚಾರಣೆಗೆ ಅವಕಾಶ ನೀಡುವುದನ್ನು ಖಾತರಿಪಡಿಸಬೇಕು ಎಂದು ಷರತ್ತು ವಿಧಿಸಿದೆ ಎಂದು ವರದಿಯಾಗಿದೆ.