ಎಲ್‌ ನಿನೋ ಕೇವಲ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿದ್ದು ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ನವದೆಹಲಿ: ಎಲ್‌ ನಿನೋ ಕೇವಲ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿದ್ದು ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಅಪಾಯ ಎದುರಿಸುವ ದೇಶಗಳ ಪಟ್ಟಿಯಲ್ಲಿ ಭಾರತ

ಇನ್ನು ಎಲ್‌ ನಿನೋದಿಂದ ಅಪಾಯ ಎದುರಿಸುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ತನ್ನ ಅತ್ಯುನ್ನತ ಮಟ್ಟದ 'ಗ್ರೇಡ್-3’ ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿರುವ ಡಬ್ಲ್ಯುಎಚ್‌ಒ ಎಲ್‌ನಿನೋ ದೇಶದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದೆ.

ಹೀಟ್‌ ವೇವ್‌, ನೀರಿನ ಕೊರತೆ, ಸಾಂಕ್ರಾಮಿಕ ರೋಗ

ಹೀಟ್‌ ವೇವ್‌, ನೀರಿನ ಕೊರತೆ, ಸಾಂಕ್ರಾಮಿಕ ರೋಗ, ಅಪೌಷ್ಠಿಕತೆ ಮತ್ತು ಆರೋಗ್ಯ ಸೇವೆಗಳಿಗೆ ಅಡ್ಡಿಯಾಬಹುದು ಎಂದಿದೆ. ಇನ್ನು ಇದರಿಂದ ಹೆಚ್ಚು ತೊಂದರೆ ಅನುಭವಿಸುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಂತಹ ರಾಷ್ಟ್ರಗಳು ಕೂಡ ಇದರಿಂದ ಬಾಧಿತವಾಗಲಿವೆ ಎಂದಿದೆ.