ಒಡಿಶಾದಲ್ಲಿ ಅರ್ನಬ್‌ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 1000ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ. ಮಳೆಗೆ 9 ಜಿಲ್ಲೆಗಳು ಬಾಧಿತವಾಗಿವೆ. ಈ ಪೈಕಿ ಗಂಜಾಂ, ಗಜಪತಿ ಜಿಲ್ಲೆಗಳ ಸುಮಾರು 1000ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ

ಭುವನೇಶ್ವರ: ಒಡಿಶಾದಲ್ಲಿ ಅರ್ನಬ್‌ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ 1000ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ. ಮಳೆಗೆ 9 ಜಿಲ್ಲೆಗಳು ಬಾಧಿತವಾಗಿವೆ. ಈ ಪೈಕಿ ಗಂಜಾಂ, ಗಜಪತಿ ಜಿಲ್ಲೆಗಳ ಸುಮಾರು 1000ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 313 ರಕ್ಷಣಾ ತಂಡಗಳು ರಾಜ್ಯಾದ್ಯಂತ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಹೆಲಿಕಾಪ್ಟರ್‌ ನೆರವಿನಿಂದ ಜನರನ್ನು ರಕ್ಷಿಸಲಾಗುತ್ತಿದೆ. ಇದುವರೆಗೆ 55,000 ಜನರನ್ನು ಪ್ರವಾಹ ಪೀಡಿತ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ. ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದ್ದು 22 ರೈಲು ಸಂಚಾರ ರದ್ದಾಗಿದೆ.

ಗಂಜಾಂ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 54 ಸೆಂ.ಮೀ.ನಷ್ಟು ಭಾರೀ ಮಳೆ

ಗಂಜಾಂ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 54 ಸೆಂ.ಮೀ.ನಷ್ಟು ಭಾರೀ ಮಳೆ ಸುರಿದಿದೆ. ಇದು ಈ ಪ್ರದೇಶದಲ್ಲಿ ಬಿದ್ದ ವಾರ್ಷಿಕ ಸರಾಸರಿ ಮಳೆಗಿಂತ ಅಧಿಕ. ಈ ಜಿಲ್ಲೆಯೊಂದರಲ್ಲೇ 2000ಕ್ಕೂ ಅಧಿಕ ಜನರು ಅತಂತ್ರರಾಗಿದ್ದಾರೆ. ಸ್ಥಳೀಯಾಡಳಿತ 4 ಹೆಲಿಕಾಪ್ಟರ್‌ಗಳನ್ನು ಬಳಸಿ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಾಗ್ರಿ ವಿತರಿಸಿದೆ.