ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು. ಏರಿಕೆ ಮಾಡಿದ್ದು, ಪರಿಷ್ಕೃತ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ.ಹಾಲಿನ ದರವನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಪರಿಷ್ಕೃತ ದರದಲ್ಲಿ ಶುಭಂ ಹಾಲು, ಹೋಮೋಜಿನೈಸ್ಡ್ ಶುಭಂ ಹಾಲಿನ ದರದಲ್ಲಿ 12 ರು. ಹೆಚ್ಚಾಗಲಿದೆ
ಬೆಂಗಳೂರು : ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರು. ಏರಿಕೆ ಮಾಡಿದ್ದು, ಪರಿಷ್ಕೃತ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ.
ಹಾಲಿನ ದರವನ್ನು ಹಳೆಯ ದರಕ್ಕೆ ಹೋಲಿಕೆ ಮಾಡಿದರೆ ಪರಿಷ್ಕೃತ ದರದಲ್ಲಿ ಶುಭಂ ಹಾಲು, ಹೋಮೋಜಿನೈಸ್ಡ್ ಶುಭಂ ಹಾಲಿನ ದರದಲ್ಲಿ 12 ರು. ಹೆಚ್ಚಾಗಲಿದೆ. ಉಳಿದವು 8 ರು. ಹೆಚ್ಚಾಗಿದೆ. ಜತೆಗೆ, ಮೊಸರಿನ ದರವೂ ಕೂಡ ಹೆಚ್ಚಾಗಲಿದ್ದು, ಅರ್ಧ ಲೀಟರ್ ಮೊಸರಿಗೆ 6 ರು. ಮತ್ತು ಒಂದು ಕೆಜಿ ಪೊಟ್ಟಣಕ್ಕೆ 14 ರು. ಏರಿಕೆಯಾಗಲಿದೆ.
ಬರ ಪರಿಸ್ಥಿತಿ ಮತ್ತು ಹೈನುಗಾರಿಕೆ ನಿರ್ವಹಣೆ ವೆಚ್ಚ ದುಬಾರಿ
ಬರ ಪರಿಸ್ಥಿತಿ ಮತ್ತು ಹೈನುಗಾರಿಕೆ ನಿರ್ವಹಣೆ ವೆಚ್ಚ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿ, ಹೈನುಗಾರಿಕೆಯಿಂದ ಹಿಂದಕ್ಕೆ ಸರಿಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಹಾಲಿನ ದರ ಲೀಟರ್‌ಗೆ 8 ರು. ಹೆಚ್ಚಳವಾಗಿದ್ದು, ಇದರಲ್ಲಿ 1 ರು. ಹಾಲು ಒಕ್ಕೂಟಗಳಿಗೆ, ರೈತರಿಗೆ 7 ರು.ನಂತೆ ಸಂದಾಯವಾಗಲಿದೆ.
ಈ ನೂತನ ದರವು ಅ.31ರ ತಡರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.
ಹಾಲಿನ ಮಾದರಿ ಹಳೆಯ ದರ(ರು.) ಪರಿಷ್ಕೃತ ದರ (ರು)
ಟೋನ್ಡ್ (ಬ್ಲೂ) ಹಾಲು 46 54
ಹೋಮೋಜಿನೈಸ್ಡ್ ಟೋನ್ಡ್ ಹಾಲು 47 56
ಹೋಮೋಜಿನೈಸ್ಡ್ ಹಸುವಿನ ಹಾಲು 50 58
ಸ್ಪೆಷಲ್ ಟೋನ್ಡ್ ಹಾಲು 52 64
ಶುಭಂ ಹಾಲು 52 64
ಹೋಮೋಜಿನೈಸ್ಡ್ ಶುಭಂ ಹಾಲು 53 65
ಮೊಸರು 500 ಗ್ರಾಂ ಪೊಟ್ಟಣ 28 34
ಮೊಸರು 1 ಕೆಜಿ ಪೊಟ್ಟಣ 54 68

