ಪನಾಮಾ: ಅಮೆರಿಕದ ಅಧ್ಯಕ್ಷ ಪಟ್ಟಕ್ಕೇರುತ್ತಿದ್ದಂತೆ ತಮ್ಮ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕುವತ್ತ ಮಹತ್ವದ ಹೆಜ್ಜೆಗಳನ್ನಿಡುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಬೆದರಿ, ಚೀನಾದೊಂದಿಗಿನ ಬೆಲ್ಟ್ ಆ್ಯಂಡ್ ರೋಡ್ ಒಪ್ಪಂದವನ್ನು ಕೈಬಿಡಲು ಪನಾಮಾ ನಿರ್ಧರಿಸಿದೆ.
ಏನಿದು ಪನಾಮಾ ವಿವಾದ?:ಅಮೆರಿಕ ನಿರ್ಮಿಸಿದ ಈ ಕಾಲುವೆಯನ್ನು 1990ರಲ್ಲಿ ಪನಾಮಾಗೆ ಹಸ್ತಾಂತರಿಸಲಾಗಿತ್ತು. ಇದು ಅಮೆರಿಕದ ಪಾಲಿಗೆ ಬಹುಮುಖ್ಯವಾದ ವ್ಯಾಪಾರಿ ಮಾರ್ಗವಾಗಿದೆ. ಇತ್ತೀಚೆಗೆ ಈ ಕಾಲುವೆ ಚೀನಾದ ಪ್ರಭಾವ ಅಧಿಕವಾಗುತ್ತಿರುವುದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ, ಈ ಹಾದಿಯಲ್ಲಿ ಸಾಗುವ ಅಮೆರಿಕನ್ ಹಡಗುಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವುದೂ ಟ್ರಂಪ್‌ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಟ್ರಂಪ್, ‘ಕಾಲುವೆಯನ್ನು ನಾವು ಕೊಟ್ಟದ್ದು ಪನಾಮಾಕ್ಕೆ ಹೊರತು ಚೀನಾಗಲ್ಲ. ಆದರೆ ಈ ಒಪ್ಪಂದವನ್ನು ಉಲ್ಲಂಘಿಸಿ ಕಾಲುವೆಯನ್ನು ಚೀನಾದ ಅಧಿಪತ್ಯಕ್ಕೆ ವಹಿಸಿದಂತಾಗಿದೆ. ಇದು ಮುಂದುವರೆದರೆ ನಾವು ಅದರ ನಿಯಂತ್ರಣವನ್ನು ಮರಳಿ ಪಡೆಯುತ್ತೇವೆ ಅಥವಾ ಇನ್ನೂ ಭಯಂಕರವಾದದ್ದೇನಾದರೂ ಮಾಡುತ್ತೇವೆ’ ಎಂದು ತೆರಿಗೆ ಬೆದರಿಕೆಯನ್ನೂ ಒಡ್ಡಿದ್ದರು.