ಜನಗಣತಿಯಲ್ಲಿ ಎಲ್ಲರೂ ಭಾಗವಹಿಸಿ : ಮೋದಿ

KannadaprabhaNewsNetwork |  
Published : Apr 27, 2026, 01:45 AM IST
Narenda Modi

ಸಾರಾಂಶ

ಈಗ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರಿ ಕೆಲಸವಲ್ಲ, ಬದಲಾಗಿ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಮತ್ತು ಪ್ರತಿಯೊಬ್ಬರ ಭಾಗವಹಿಸುವಿಕೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

 ನವದೆಹಲಿ :  ಈಗ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರಿ ಕೆಲಸವಲ್ಲ, ಬದಲಾಗಿ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಮತ್ತು ಪ್ರತಿಯೊಬ್ಬರ ಭಾಗವಹಿಸುವಿಕೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

''''ಮನ್ ಕಿ ಬಾತ್'''' ನಲ್ಲಿ ಮಾತನಾಡಿದ ಮೋದಿ

ತಮ್ಮ ಮಾಸಿಕ ರೇಡಿಯೋ ಭಾಷಣ ''''ಮನ್ ಕಿ ಬಾತ್'''' ನಲ್ಲಿ ಮಾತನಾಡಿದ ಮೋದಿ, ‘ಜನಗಣತಿಯ ಸಮಯದಲ್ಲಿ ಜನರು ಒದಗಿಸುವ ಎಲ್ಲಾ ಮಾಹಿತಿಯು ಸುರಕ್ಷಿತ ಮತ್ತು ಗೌಪ್ಯವಾಗಿರುತ್ತದೆ. ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ 2027ರ ಜನಗಣತಿಯನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘2027ರ ಜನಗಣತಿಯನ್ನು ಡಿಜಿಟಲ್ ಮಾಡಲಾಗಿದೆ.

‘2027ರ ಜನಗಣತಿಯನ್ನು ಡಿಜಿಟಲ್ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನು ನೇರವಾಗಿ ಡಿಜಿಟಲ್ ವಿಧಾನಗಳ ಮೂಲಕ ದಾಖಲಿಸಲಾಗುತ್ತಿದೆ. ಮನೆಗಳಿಗೆ ಭೇಟಿ ನೀಡುವ ಸಿಬ್ಬಂದಿ ಎಲ್ಲರೊಂದಿಗೆ ಮಾತನಾಡಿ ಮೊಬೈಲ್ ಆ್ಯಪ್‌ನಲ್ಲೇ ಮಾಹಿತಿಯನ್ನು ನಮೂದಿಸುತ್ತಾರೆ

‘ಸ್ವಯಂ ಎಣಿಕೆ ಕಾರ್ಯ ಪೂರ್ಣಗೊಂಡ ರಾಜ್ಯಗಳಲ್ಲಿ, ಜನಗಣತಿ ಸಿಬ್ಬಂದಿ ಮನೆಗಳ ಪಟ್ಟಿ ಮಾಡುವ ಕೆಲಸವನ್ನು ಸಹ ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ, ಸುಮಾರು 1 ಕೋಟಿ 20 ಲಕ್ಷ ಕುಟುಂಬಗಳ ಮನೆಗಳ ಪಟ್ಟಿ ಮಾಡುವ ಕೆಲಸ ಪೂರ್ಣಗೊಂಡಿದೆ’ ಎಂದು ಪ್ರಧಾನಿ ಹೇಳಿದರು.

ಪವನಶಕ್ತಿಯಲ್ಲಿ ಮೈಲಿಗಲ್ಲು:

ಭಾರತವು ಪವನ ವಿದ್ಯುತ್ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದ್ದು, ದೇಶದ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 56 ಗಿಗಾವ್ಯಾಟ್‌ಗಳನ್ನು ಮೀರಿದೆ ಎಂದು ಮೋದಿ ಹರ್ಷಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಾಳಿಕೋರ ಅಲೆನ್‌ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ!
7 ಪಕ್ಷಾಂತರಿಗಳ ಸದಸ್ಯತ್ವ ರದ್ದು : ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ