ಇನ್ನೇನಿದ್ರೂ ಫೋನ್‌ನಲ್ಲಿ ಮಾತುಕತೆ : ಟ್ರಂಪ್

KannadaprabhaNewsNetwork |  
Published : Apr 27, 2026, 01:45 AM ISTUpdated : Apr 27, 2026, 05:05 AM IST
Donald Trump

ಸಾರಾಂಶ

ಸಂಧಾನಕಾರ ರಾಷ್ಟ್ರ ಪಾಕಿಸ್ತಾನಕ್ಕೆ ತಮ್ಮ ನಿಯೋಗ ಹೋಗುವುದಿಲ್ಲ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ, ‘ಇನ್ನೇನಿದ್ದರೂ ಫೋನ್‌ನಲ್ಲಿ ಮಾತುಕತೆ ನಡೆಯುತ್ತದೆ. ಬೇಕಿದ್ದರೆ ಇರಾನ್‌ ಕರೆ ಮಾಡಲಿ’ ಎಂದು ಹೇಳಿದ್ದಾರೆ.

 ವಾಷಿಂಗ್ಟನ್‌: ಸಂಧಾನಕಾರ ರಾಷ್ಟ್ರ ಪಾಕಿಸ್ತಾನಕ್ಕೆ ತಮ್ಮ ನಿಯೋಗ ಹೋಗುವುದಿಲ್ಲ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ, ‘ಇನ್ನೇನಿದ್ದರೂ ಫೋನ್‌ನಲ್ಲಿ ಮಾತುಕತೆ ನಡೆಯುತ್ತದೆ. ಬೇಕಿದ್ದರೆ ಇರಾನ್‌ ಕರೆ ಮಾಡಲಿ’ ಎಂದು ಹೇಳಿದ್ದಾರೆ. 

ಇರಾನ್‌ ಜತೆಗಿನ ಯುದ್ಧ ಆದಷ್ಟು ಬೇಗ ಮುಗಿಯಬಹುದು

ಫಾಕ್ಸ್‌ ನ್ಯೂಸ್‌ ಜತೆ ಮಾತನಾಡಿ, ‘ಇರಾನ್‌ ಜತೆಗಿನ ಯುದ್ಧ ಆದಷ್ಟು ಬೇಗ ಮುಗಿಯಬಹುದು ಹಾಗೂ ನಾವು ಜಯಶಾಲಿಗಳಾಗುತ್ತೇವೆ. ಮುಂದಿನ ಮಾತುಕತೆಗಳು ದೂರವಾಣಿ ಮೂಲಕವೇ ನಡೆಯಲಿದ್ದು, ಮಾತಾಡಬೇಕಿದ್ದರೆ ಇರಾನ್‌ ನಮಗೆ ಕರೆ ಮಾಡಲಿ. ಇರಾನಿಗರು ಬೇಗ ಸ್ಮಾರ್ಟ್‌ ಆಗಲಿ’ ಎಂದಿದ್ದಾರೆ.

ಅಣು ಧೂಳನ್ನು ವಶಪಡಿಸಿಕೊಳ್ಳುತ್ತೇವೆ

ಜತೆಗೆ, ‘ಸಂಧಾನದ ಭಾಗವಾಗಿ ಇರಾನ್‌ ಬಳಿಯಿರುವ ಅಣು ಧೂಳನ್ನು ವಶಪಡಿಸಿಕೊಳ್ಳುತ್ತೇವೆ’ ಎಂದೂ ಟ್ರಂಪ್‌ ಹೇಳಿದ್ದಾರೆ. ಈ ಮೂಲಕ, ಸಂಧಾನದ ಬಾಗಿಲು ಸಂಪೂರ್ಣ ಮುಚ್ಚಿಲ್ಲ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಾಳಿಕೋರ ಅಲೆನ್‌ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ!
7 ಪಕ್ಷಾಂತರಿಗಳ ಸದಸ್ಯತ್ವ ರದ್ದು : ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ