ಪಾಕ್‌ಗೆ ನೌಕಾದಳದ ಮಾಹಿತಿ ರವಾನೆ : ಎನ್‌ಐಎಯಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರ ವಿಚಾರಣೆ

Published : Aug 29, 2024, 10:59 AM IST
NIA

ಸಾರಾಂಶ

ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋಗಳನ್ನು ಪಾಕಿಸ್ತಾನ ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ಎನ್‌ಐಎ ಬುಧವಾರ ವಿಚಾರಣೆ ನಡೆಸಿದೆ.

ಕಾರವಾರ :  ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಫೋಟೋಗಳನ್ನು ಪಾಕಿಸ್ತಾನ ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ಕಳುಹಿಸಿದ ಆರೋಪದ ಮೇಲೆ ಮೂವರನ್ನು ಎನ್‌ಐಎ ಬುಧವಾರ ವಿಚಾರಣೆ ನಡೆಸಿದೆ.

ಎನ್ಐಎನ ಮೂವರು ಅಧಿಕಾರಿಗಳು ಸೇರಿ ಆರು ಮಂದಿ ತಂಡ ಕಾರವಾರಕ್ಕೆ ಆಗಮಿಸಿ ನೌಕಾದಳದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತೋಡೂರಿನ ಸುನೀಲ ನಾಯ್ಕ, ಮುದಗಾದ ವೇತನ ತಾಂಡೇಲ ಹಾಗೂ ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕ ಅವರನ್ನು ವಿಚಾರಣೆ ನಡೆಸಿದೆ.

ದೇಶವಿರೋಧಿ ಚಟುವಟಿಕೆ ಆಧಾರದಲ್ಲಿ 2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಹಾಗೂ ಇತರರನ್ನು ಎನ್‌ಐಎ ಬಂಧಿಸಿತ್ತು. ಅವರ ವಿಚಾರಣೆ ವೇಳೆ ಈ ಮೂವರ ಹೆಸರನ್ನು ಬಾಯಿಬಿಟ್ಟಿದ್ದರು. ನೌಕಾಪಡೆಯ ಯುದ್ಧ ಹಡಗು, ಸ್ಥಳದ ಮಾಹಿತಿ ಇರುವ ಫೋಟೋಗಳನ್ನು ಇವರು ದೀಪಕ್‌ ಎಂಬಾತನಿಗೆ ಕಳುಹಿಸಿದ ಆರೋಪ ಎದುರಿಸುತ್ತಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !