ಸೇವೆ ಸ್ಥಗಿತಕ್ಕೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಮಾ.15ರ ಗಡುವು

KannadaprabhaNewsNetwork |  
Published : Feb 17, 2024, 01:15 AM ISTUpdated : Feb 17, 2024, 12:13 PM IST
ಪೇಟಿಎಂ | Kannada Prabha

ಸಾರಾಂಶ

ಪೇಟಿಎಂ ಮೇಲಿನ ನಿರ್ಬಂಧವನ್ನು ಆರ್‌ಬಿಐ ಮಾ.15ರವರೆಗೂ ವಿಸ್ತರಿಸಿದ್ದು, ಪೇಟಿಎಂ ತನ್ನ ಒಪ್ಪಂದವನ್ನು ಎಕ್ಸಿಸ್‌ ಬ್ಯಾಂಕ್‌ ಜೊತೆ ಮಾಡಿಕೊಂಡಿದೆ.

ಮುಂಬೈ: ಪೇಟಿಎಂ ಪೇಮೆಂಟ್ ಬ್ಯಾಂಕ್‌ ಮೇಲಿನ ಹಲವು ಸೇವೆಗಳ ಸ್ಥಗಿತಕ್ಕೆ ವಿಧಿಸಿದ್ದ ಗಡುವನ್ನು ಆರ್‌ಬಿಐ, ಫೆ.29ರ ಬದಲು ಮಾ.15ಕ್ಕೆ ವಿಸ್ತರಿಸಿದೆ.

ಇದರಿಂದಾಗಿ ನಿರ್ಬಂಧಗಳು ಮಾ.16ರಿಂದ ಜಾರಿಯಾಗಲಿವೆ. ಪೇಟಿಎಂ ಫಾಸ್ಟ್ಯಾಗ್‌, ವ್ಯಾಲೆಟ್‌, ಹೊಸ ಖಾತೆ ಆರಂಭ, ಹೊಸ ಠೇವಣಿಗಳ ಮೇಲೆ ನಿರ್ಬಂಧ ಜಾರಿಗೆ ಬರಲಿದೆ.

ಆದರೆ ಹಾಲಿ ಇರುವ ಠೇವಣಿದಾರರು ಹಣ ವಾಪಸು ಪಡೆಯಲು ಯಾಔಉದೇ ನಿರ್ಭಂಧ ಇರುವುದಿಲ್ಲ.

ಪೇಟಿಎಂ ಬ್ಯಾಂಕ್‌ ಕೆವೈಸಿ ನಿಯಮ ಪಾಲಿಸಿಲ್ಲ ಹಾಗೂ ಅಕ್ರಮ ಹಣ ವರ್ಗ ಮಾಡಿದೆ ಎಂದು ಆರೋಪಿಸಿ ಆರ್‌ಬಿಐ ನಿರ್ಬಂಧ ಹೇರಿದೆ.

ಎಕ್ಸಿಸ್‌ ಬ್ಯಾಂಕ್‌ಗೆ ಪೇಟಿಎಂ ಶಿಫ್ಟ್‌

ಪೇಟಿಎಂ ಬ್ಯಾಂಕ್‌ ಮೂಲಕ ವ್ಯವಹಾರ ನಡೆಸುತ್ತಿದ್ದ ಪೇಟಿಎಂ, ಈಗ ತನ್ನ ವ್ಯವಹಾರವನ್ನು ಎಕ್ಸಿಸ್‌ ಬ್ಯಾಂಕ್‌ ಮೂಲಕ ನಡೆಸಲು ಒಪ್ಪಂದ ಮಾಡಿ ಕೊಂಡಿದೆ. ಇದರಿಂದ ಪೇಟಿಎಂ ಆ್ಯಪ್‌ ಸೇವೆ ಅಬಾಧಿತವಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಐಗೆ ಮೋದಿ ಮಾನವ ಮಂತ್ರ
ಬಿಲ್ಲಿಂಗ್‌ ಸಾಫ್ಟ್‌ವೇರ್‌ ಬಳಸಿ ರೆಸ್ಟೋರೆಂಟ್‌ಗಳಲ್ಲಿ₹70000 ಕೋಟಿ ತೆರಿಗೆ ವಂಚನೆ: ಐಟಿಗೇ ಶಾಕ್‌!