ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಪಕ್ಷದ 2017 ರಿಂದ 2021ರವರೆಗಿನ ವಾರ್ಷಿಕ ಮಾಹಿತಿ ಮರುಪರಿಶೀಲನೆ ಮಾಡುವುದನ್ನು ತಡೆಯಬೇಕು ಎಂದು ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ಇದರೊಂದಿಗೆ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಮತ್ತೊಮ್ಮೆ ಹಿನ್ನಡೆ ಆದಂತಾಗಿದೆ. 2017 ರಿಂದ 2021ರವರೆಗೆ 4 ಆರ್ಥಿಕ ಸಾಲುಗಳ ಆದಾಯ ತೆರಿಗೆ ಮಾಹಿತಿಯನ್ನು ಇಲಾಖೆ ವತಿಯಿಂದ ಮರುಪರಿಶೀಲನೆ ಆರಂಭಿಸಲಾಗಿದ್ದು, ಅದನ್ನು ವಜಾ ಮಾಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೂ ಮೊದಲು ನ್ಯಾಯಾಲಯವು 2015-17ರವರೆಗಿನ ಮಾಹಿತಿ ಮರುಪರಿಶೀಲನೆಗೂ ತಡೆ ನೀಡಲು ಕೋರ್ಟ್ ನಿರಾಕರಿಸಿತ್ತು.