ವೆರಾವಲ್ (ಗುಜರಾತ್): ಸೋಮನಾಥ ದೇಗುಲ ದಾಳಿಗೆ ಸಾವಿರ ವರ್ಷ ಹಿನ್ನೆಲೆ ಅಲ್ಲಿ ನಡೆಯುತ್ತಿರುವ ಮೂರು ದಿನಗಳ ‘ ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದ ಕೊನೆ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ಜ.8 ರಿಂದಲೇ ದೇಗುಲದಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭವಾಗಿತ್ತು. ಜ.11 ಕಡೇ ದಿನವಾಗಿದ್ದು, ಮೋದಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರಧಾನಿ ಅವರು ಶನಿವಾರವೇ ಗುಜರಾತಿಗೆ ತೆರಳಿದ್ದಾರೆ.
ಭಾನುವಾರ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗಿಯಾಗಿ ಸಂಜೆ ಓಂಕಾರ ಮಂತ್ರ ಪಠಣಕ್ಕೆ ಸಾಕ್ಷಿಯಾಗಲಿದ್ದಾರೆ. ಅನಂತರ ಅವರು ದೇವಾಲಯದ ಆವರಣದಲ್ಲಿ ಡ್ರೋನ್ ಪ್ರದರ್ಶನ ವೀಕ್ಷಿಸಲಿದ್ದಾರೆ.