''ಮಹಾಸಾಗರ್‌'' ಎಂಬ ಹೊಸ ಪರಿಕಲ್ಪನೆಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ : ಚೀನಾಗೆ ಸಡ್ಡು

KannadaprabhaNewsNetwork | Updated : Mar 13 2025, 04:31 AM IST

ಸಾರಾಂಶ

ಹಿಂದೂ ಮಹಾಸಾಗರದಲ್ಲಿ ಕಮ್ಯುನಿಸ್ಟ್ ಚೀನಾದ ಅಧಿಪತ್ಯ ಸ್ಥಾಪಿಸಲು ನಡೆಸಿರುವ ಯತ್ನವನ್ನು ತಡೆಯಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪರಾಷ್ಟ್ರ ಮಾರಿಷಸ್‌ನಲ್ಲಿ ''ಮಹಾಸಾಗರ್‌'' ಎಂಬ ಹೊಸ ಪರಿಕಲ್ಪನೆಯನ್ನು ಘೋಷಿಸಿದ್ದಾರೆ.

 ಲೂಯಿಸ್‌ :  ಹಿಂದೂ ಮಹಾಸಾಗರದಲ್ಲಿ ಕಮ್ಯುನಿಸ್ಟ್ ಚೀನಾದ ಅಧಿಪತ್ಯ ಸ್ಥಾಪಿಸಲು ನಡೆಸಿರುವ ಯತ್ನವನ್ನು ತಡೆಯಲು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪರಾಷ್ಟ್ರ ಮಾರಿಷಸ್‌ನಲ್ಲಿ ''''''''ಮಹಾಸಾಗರ್‌'''''''' ಎಂಬ ಹೊಸ ಪರಿಕಲ್ಪನೆಯನ್ನು ಘೋಷಿಸಿದ್ದಾರೆ.

ಜತೆಗೆ, ಕಡಲ ಭದ್ರತೆ, ವ್ಯಾಪಾರಕ್ಕೆ ಸಂಬಂಧಿಸಿ ಎಂಟು ಒಪ್ಪಂದಗಳಿಗೆ ಮಾರಿಷಸ್‌ ಪ್ರಧಾನಿ ನವೀನ್‌ ಚಂದ್ರ ರಾಮಗೂಲಂ ಅವರ ಜತೆಗೆ ಇದೇ ವೇಳೆ ಸಹಿಹಾಕಿದ್ದಾರೆ.

ಗ್ಲೋಬಲ್‌ ಸೌತ್‌(ಬೆಳೆಯುತ್ತಿರುವ ದೇಶಗಳು)ನ ಸಮಗ್ರ ಅಭಿವೃದ್ಧಿ ಮತ್ತು ಭದ್ರತೆಗಾಗಿ ಮಹತ್ವಾಕಾಂಕ್ಷೆಯ ಮಹಾಸಾಗರ್‌ (ಎಲ್ಲಾ ಕ್ಷೇತ್ರಗಳಲ್ಲಿ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಸಮಗ್ರ ಪ್ರಗತಿ- Mutual and Holistic Advancement for Security and Growth Across Regions) ಪರಿಕಲ್ಪನೆ ಘೋಷಣೆ ಮಾಡಿದ ಅ‍ವರು, ವ್ಯಾಪಾರಕ್ಕಾಗಿ ಅಭಿವೃದ್ಧಿ, ಸುಸ್ಥಿರ ಪ್ರಗತಿಗಾಗಿ ಸಾಮರ್ಥ್ಯವೃದ್ಧಿ ಮತ್ತು ಭವಿಷ್ಯಕ್ಕಾಗಿ ಪರಸ್ಪರ ಭದ್ರತೆಯ ಮೇಲೆ ನಮ್ಮ ಈ ನೂತನ ಪರಿಕಲ್ಪನೆಯು ಗಮನ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಅವರು ಮಾರಿಷಸ್‌ ಅನ್ನು ಭಾರತದ ಪ್ರಮುಖ ಪಾಲುದಾರ ಎಂದು ಕರೆದ ಅವರು, ಭಾರತದ ಸಾಗರ್‌ (ಎಲ್ಲಾ ಕ್ಷೇತ್ರದ ಭದ್ರತೆ ಮತ್ತು ಬೆಳವಣಿಗೆ) ಚಿಂತನೆಗೆ 10 ವರ್ಷಗಳ ಹಿಂದೆ ಮಾರಿಷಸ್‌ನಲ್ಲಿ ಹೇಗೆ ಬುನಾದಿ ಹಾಕಲಾಯಿತು ಎಂಬುದನ್ನು ಸ್ಮರಿಸಿದರು.8 ಒಪ್ಪಂದಗಳಿಗೆ ಸಹಿ:

ಇದೇ ವೇಳೆ ಭಾರತವು ಕಡಲ ಭದ್ರತೆ, ವ್ಯಾಪಾರ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಕಾರ, ಉತ್ತೇಜನ ನೀಡುವ ಎಂಟು ಒಪ್ಪಂದಗಳಿಗೆ ಮಾರಿಷಸ್‌ ಜತೆಗೆ ಸಹಿಹಾಕಿದೆ. ಗಡಿಯಾಚೆಗಿನ ವ್ಯವಹಾರದಲ್ಲಿ ರಾಷ್ಟ್ರೀಯ ಕರೆನ್ಸಿ ಬಳಕೆ, ಕಡಲ ಕುರಿತ ಮಾಹಿತಿ ವಿನಿಮಯ, ಅಕ್ರಮ ಹಣ ವರ್ಗಾವಣೆ ತಡೆಗೆ ಜಂಟಿ ಕೆಲಸ, ಸಣ್ಣ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಉದ್ದೇಶಗಳನ್ನು ಈ ಒಪ್ಪಂದಗಳು ಹೊಂದಿವೆ.

ಮೋದಿಗೆ ಮಾರಿಷಸ್‌ ಅತ್ಯುನ್ನತ ಗೌರವ ಪ್ರದಾನ

 ಪೋರ್ಟ್‌ ಲೂಯಿಸ್‌ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್‌ನ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡು ದಿನಗಳ ಮಾರಿಷಸ್‌ ಪ್ರವಾಸದಲ್ಲಿರುವ ಮೋದಿ ಅವರಿಗೆ ಕೊನೆಯ ದಿನವಾದ ಬುಧವಾರ ಪೋರ್ಟ್‌ ಲೂಯಿಸ್‌ನಲ್ಲಿ ನಡೆದ ರಾಷ್ಟ್ರೀಯ ದಿನಾಚರಣೆಯಲ್ಲಿ ''ದಿ ಗ್ರ್ಯಾಂಡ್‌ ಕಮಾಂಡ್‌ ಆಫ್‌ ದಿ ಸ್ಟಾರ್‌ ಆ್ಯಂಡ್‌ ಕೋ ಆಫ್‌ ದಿ ಇಂಡಿಯನ್‌ ಓಷಿಯನ್‌'' ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ರೀತಿ ಮಾರಿಷಸ್‌ನ ಅತ್ಯುನ್ನತ ಗೌರವ ಪಡೆದ ಮೊದಲ ಭಾರತೀಯ ಹಾಗೂ ಆರನೇ ವಿದೇಶಿಗ ಮೋದಿ ಆಗಿದ್ದಾರೆ.

Share this article