ರಾಜಕೀಯ ಹಿನ್ನೆಲೆಯಿಲ್ಲದ 1 ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆತನ್ನಿ- ಕುಟುಂಬ ರಾಜಕಾರಣಕ್ಕೆ ಪ್ರಧಾನಿ ಪ್ರತ್ಯಕ್ಷ ಸವಾಲು?

KannadaprabhaNewsNetwork |  
Published : Aug 16, 2024, 12:50 AM ISTUpdated : Aug 16, 2024, 05:31 AM IST
ಮೋದಿ | Kannada Prabha

ಸಾರಾಂಶ

ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆದುಕೊಂಡು ಬನ್ನಿ. ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿ. ಆಗ ನೋಡಿ, ಈ ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕಣ್ಮರೆಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

  ನವದೆಹಲಿ :  ‘ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆದುಕೊಂಡು ಬನ್ನಿ. ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿ. ಆಗ ನೋಡಿ, ಈ ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕಣ್ಮರೆಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಕುಟುಂಬ ರಾಜಕೀಯದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಕುರಿತು ದೇಶಕ್ಕೆ ವಿನೂತನ ಕರೆ ನೀಡಿದ ಅವರು, ‘ನಮ್ಮ ದೇಶದ ರಾಜಕೀಯ ಕ್ಷೇತ್ರಕ್ಕೆ ಒಂದು ಲಕ್ಷ ಹೊಸ ಜನಪ್ರತಿನಿಧಿಗಳು ಬರಬೇಕು. ಅವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಯುವಕರಾಗಿರಬೇಕು. 

ಅವರ ಅಪ್ಪ-ಅಮ್ಮ, ಅಣ್ಣ-ತಮ್ಮ, ಮಾವ-ಅತ್ತೆ ಅಥವಾ ಸಂಬಂಧಿಕರು ಯಾವತ್ತೂ ರಾಜಕಾರಣದಲ್ಲಿ ಇದ್ದಿರಬಾರದು. ಅಂತಹ ಪ್ರತಿಭಾವಂತ, ಹೊಸ ರಕ್ತ ರಾಜಕಾರಣಕ್ಕೆ ಬರಬೇಕು. ಅವರು ಪಂಚಾಯ್ತಿ, ನಗರಪಾಲಿಕೆ, ಜಿಲ್ಲಾ ಪರಿಷತ್‌, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಿಗೆ ಬೇಕಾದರೂ ಆಯ್ಕೆಯಾಗಲಿ. ಆಗ ದೇಶದಿಂದ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ತನ್ನಿಂತಾನೇ ಮರೆಯಾಗುತ್ತದೆ. ತನ್ಮೂಲಕ ರಾಜಕೀಯಕ್ಕೆ ಹೊಸ ಐಡಿಯಾಗಳು ಬರುತ್ತವೆ’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು