ಪರಿಸರ ಸಂಬಂಧಿ ವಿಡಿಯೋ ಗೇಮ್‌ ತಯಾರಿಸಿ : ಮೋದಿ

KannadaprabhaNewsNetwork |  
Published : Apr 14, 2024, 01:46 AM ISTUpdated : Apr 14, 2024, 07:17 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಸಮಾಜದ ವಿವಿಧ ವರ್ಗಗಳ ಜತೆ ತಮ್ಮ ಖುದ್ದು ಭೇಟಿ ಹಾಗೂ ಸಂವಾದವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ 7 ಉದಯೋನ್ಮುಖ ವಿಡಿಯೋ ಗೇಮ್‌ ತಯಾರಕರೊಂದಿಗೆ ಶನಿವಾರ ಸಂವಾದ ನಡೆಸಿದರು

ನವದೆಹಲಿ: ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಸಮಾಜದ ವಿವಿಧ ವರ್ಗಗಳ ಜತೆ ತಮ್ಮ ಖುದ್ದು ಭೇಟಿ ಹಾಗೂ ಸಂವಾದವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ 7 ಉದಯೋನ್ಮುಖ ವಿಡಿಯೋ ಗೇಮ್‌ ತಯಾರಕರೊಂದಿಗೆ ಶನಿವಾರ ಸಂವಾದ ನಡೆಸಿದರು. ಈ ವೇಳೆ, ಭಾರತದ ವಿಡಿಯೋ ಗೇಮರ್‌ಗಳು ಭವಿಷ್ಯದಲ್ಲಿ ಜಾಗತಿಕ ತಾಪಮಾನವನ್ನು ಕುಗ್ಗಿಸುವಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಿಡಿಯೋ ಗೇಮ್‌ಗಳನ್ನು ತಯಾರಿಸಬೇಕು ಎಂದು ಮನವಿ ಮಾಡಿದರು.

ವಿಡಿಯೋ ಗೇಮ್‌ ಸೃಷ್ಟಿಕರ್ತರಾದ ಅನಿಮೇಶ್ ಅಗರವಾಲ್, ನಮನ್ ಮಾಥುರ್, ಮಿಥಿಲೇಶ್ ಪಾಟಂಕರ್, ಪಾಯಲ್ ಧಾರೆ, ತೀರ್ಥ್ ಮೆಹ್ತಾ, ಗಣೇಶ್ ಗಂಗಾಧರ್ ಮತ್ತು ಅಂಶು ಬಿಶ್ತ್ ಜತೆ ಸಂವಾದ ನಡೆಸಿದ ಅವರು, ‘ನಾನು ಹೊಸ ಮಿಷನ್‌ನೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಜಾಗತಿಕ ನಾಯಕರು ಸದಾಕಾಲ ಪರಿಸರ ಸಮತೋಲನದ ಕುರಿತು ಮಾತನಾಡುತ್ತಾರೆ. ನಾನೂ ಸಹ ನಿಮ್ಮನ್ನು ಅದೇ ರೀತಿಯ ವಿಡಿಯೋ ಗೇಮ್‌ಗಳನ್ನು ತಯಾರಿಸಬೇಕೆಂದು ವಿನಂತಿಸುತ್ತೇನೆ. ಉದಾಹರಣೆಗೆ ಜಗತ್ತಿನಲ್ಲಿ ಪರಿಸರ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಕಂಡುಕೊಳ್ಳುವಂತೆ ಆಟದ ಥೀಮ್‌ ಇರಬೇಕು. ಅಲ್ಲದೆ ಇಂತಹ ಗೇಮ್‌ಗಳು ಅತ್ಯಂತ ಪುಟ್ಟ ಮಗು ಸಹಿತ ಆಡುವಷ್ಟು ಸರಳೀಕೃತವಾಗಿದ್ದು, ಅದಕ್ಕೆ ಚಿಕ್ಕ ವಯಸ್ಸಿನಿಂದಲೇ ಗೇಮ್‌ಗಳ ಮೂಲಕ ಪರಿಸರ ಸ್ವಚ್ಛತೆಯ ಅರಿವು ಮೂಡುವಂತಾಗಬೇಕು’ ಎಂದು ತಿಳಿಸಿದರು.

ಮಹಿಳಾ ಪಾಲ್ಗೊಳ್ಳುವಿಕೆ: ಇದೇ ವೇಳೆ ಗೇಮಿಂಗ್‌ ಉದ್ಯಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಾ, ಗೇಮಿಂಗ್‌ v/s ಗ್ಯಾಂಬ್ಲಿಂಗ್‌ (ಜೂಜಾಡುವಿಕೆ) ಇಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತೂ ಸಹ ಚರ್ಚೆ ನಡೆಸಿದರು. ಯುದ್ಧ ಸಂಬಂಧಿ ಹಿಂಸಾತ್ಮಕ ಗೇಮ್‌ ಬೇಡ ಎಂದು ಮನವಿ ಮಾಡಿದರು.

ರಾಹುಲ್‌ ಗಾಂಧಿಗೆ ‘ನೂಬ್‌’ ಎಂದು ಜರಿದ ಪ್ರಧಾನಿ: ಆನ್‌ಲೈನ್‌ ಗೇಮ್ಸ್‌ ನಿಯಮಗಳ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗೆ ‘ನೂಬ್‌’ ಎಂದು ಕರೆಯಲಾಗುತ್ತದೆ ಎಂದು ವಿಡಿಯೋ ಗೇಮ್‌ ತಯಾರಕರು ಪ್ರಧಾನಿ ಮೋದಿಗೆ ತಿಳಿಸಿದರು. ಆಗ ಮೋದಿ ‘ಹಾಗಾದರೆ ರಾಜಕೀಯದಲ್ಲಿ ನೂಬ್‌ ಯಾರು? ಗೊತ್ತು ತಾನೆ’ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನೇತಾರ ರಾಹುಲ್‌ ಗಾಂಧಿಯನ್ನು ಟೀಕಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!