ಸಣ್ಣ ರಾಜಕಾರಣಿಯಂತೆ ‘ಭಯಗ್ರಸ್ತ’ ಮೋದಿ ವರ್ತನೆ: ಖರ್ಗೆ ಆಕ್ರೋಶ

KannadaprabhaNewsNetwork |  
Published : Apr 25, 2024, 01:04 AM ISTUpdated : Apr 25, 2024, 05:23 AM IST
Mallikarjun Kharge

ಸಾರಾಂಶ

ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಮೊದಲ ಹಂತದ ವೋಟಿಂಗ್ ನಲ್ಲಿ ಅದೃಶ್ಯ ಮತದಾರರಿಂದ ಮೋದಿಗೆ ಭಯ ಶುರುವಾಗಿದೆ.

ತಿರುವನಂತಪುರ:‘ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಮೊದಲ ಹಂತದ ವೋಟಿಂಗ್ ನಲ್ಲಿ ಅದೃಶ್ಯ ಮತದಾರರಿಂದ ಮೋದಿಗೆ ಭಯ ಶುರುವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಖರ್ಗೆ,‘ಮೋದಿ ಸಣ್ಣ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆ. ಅವರು ಈ ದೇಶದ ಇತಿಹಾಸ, ರಾಷ್ಟ್ರದ ಒಗ್ಗಟ್ಟಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಮೋದಿಗೆ ಕಾಂಗ್ರೆಸ್ ಏನೂ ಅಲ್ಲವಾಗಿದ್ದರೆ , ಯಾಕೆ ಬಹಳ ಹಳೆಯ ಪಕ್ಷದ ಬಗ್ಗೆ ಇಷ್ಟೊಂದು ಯೋಚಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಕಳೆದ 3 ದಿನದಿಂದ ಮೋದಿ ಅವರು ಕಾಂಗ್ರೆಸ್ ಪಕ್ಷವು ದಲಿತರ ಮೀಸಲು ಕಿತ್ತು ಮುಸ್ಲಿಮರಿಗೆ ಕೊಡಲಿದೆ ಹಾಗೂ ದೇಶದ ಜನರ ಆಸ್ತಿಯನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

‘ನಾವಿಕ್‌’ ದಿಕ್ಸೂಚಿ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆ
ಇರಾನ್‌ ಮೇಲೆ ಭೂದಾಳಿಗೆ ಅಮೆರಿಕ ಸಿದ್ಧತೆ?