ಸಮಸ್ತ ಮಾನವ ಕಲ್ಯಾಣಕ್ಕೇ ಕೃತಕ ಬುದ್ಧಿಮತ್ತೆಯ ಲಾಭ ಸಿಗಬೇಕು- ಕೆಲ ದೇಶಗಳ ಸ್ವತ್ತಾಗಬಾರದು । ಜಾಗತಿಕ ಟೆಕ್ ಲೋಕಕ್ಕೆ ಸಂದೇಶಚಾಟ್‌ಜಿಪಿಟಿ ಖ್ಯಾತಿಯಓಪನ್ ಎಐನಿಂದಲೂ
ನವದೆಹಲಿ: ಬೆಂಗಳೂರಿನಲ್ಲಿ ಆಂಥ್ರೋಪಿಕ್ ತನ್ನ ಕಚೇರಿ ಆರಂಭಿಸಿದ ಬೆನ್ನಲ್ಲೇ ಮತ್ತೊಂದು ಟೆಕ್ ದೈತ್ಯ, ‘ಚಾಟ್‌ಜಿಪಿಟಿ’ ಸೇವೆ ನೀಡುವ ಓಪನ್ ಎಐ ಕರ್ನಾಟಕದ ರಾಜಧಾನಿಯಲ್ಲಿ ತನ್ನ ಶಾಖೆ ಪ್ರಾರಂಭಿಸುವುದಕ್ಕೆ ಮುಂದಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಭಾಗಿಯಾಗಿರುವ ಓಪನ್ ಎಐ ಸಿಇಒ ಸ್ಯಾಮ್ ಅಲ್ಟಮನ್ ಅವರೇ ಸ್ವತಃ ಈ ಬಗ್ಗೆ ಘೋಷಿಸಿದ್ದಾರೆ.
ವಿವರ 7--
ಕೊಡಲು ₹10 ಲಕ್ಷ ಕೋಟಿ
ನವದೆಹಲಿ: ಜನರಿಗೆ ಕೈಗೆಟಕುವ ದರದಲ್ಲಿ ಎಐ ಸೇವೆ ತಲುಪಿಸಲು 7 ವರ್ಷಗಳಲ್ಲಿ 10 ಲಕ್ಷ ಕೋಟಿ ರು. ಹೂಡಿಕೆ ಮಾಡುವುದಾಗಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭರವಸೆ ನೀಡಿದ್ದಾರೆ. ಜಿಯೋ ಈಗ ಇಂಟರ್ನೆಟ್ ಯುಗದ ನಂತರ ಇಂಟೆಲಿಜೆನ್ಸ್ ಯುಗವನ್ನು ಸಂಪರ್ಕಿಸಲಿದೆ. ಜಾಮ್‌ನಗರದಲ್ಲಿ ಕಂಪನಿಯು ಎಐ-ಸಿದ್ಧ ಡೇಟಾ ಸೆಂಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ ಎಂದಿದ್ದಾರೆ.
ನವದೆಹಲಿ: ಕೃತಕ ಬುದ್ಧಿಮತ್ತೆ(ಎಐ) ಕೆಲವೇ ದೇಶಗಳು, ವ್ಯಕ್ತಿಗಳ ಸ್ವತ್ತಾಗಬಾರದು. ಬದಲಾಗಿ ಸಮಸ್ತ ಮಾನವ ಕಲ್ಯಾಣಕ್ಕೇ ಅದರ ಲಾಭ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ಜಾಗತಿಕ ಸಮುದಾಯದ ಮುಂದೆ ಮಾನವ ಕೇಂದ್ರಿತ ‘ಮಾನವ್’ ಮಂತ್ರ ಜಪಿಸಿದ್ದಾರೆ.ಮಾನವ್ (ಎಂಎಎನ್‌ಎವಿ) ವಿಷನ್‌ನಲ್ಲಿ ‘ಎಂ’ ಅಂದರೆ ನೈತಿಕ ಮತ್ತು ನ್ಯಾಯಪರ ವ್ಯವಸ್ಥೆ, ‘ಎ’ ಅಂದರೆ ಆಡಳಿತದ ಉತ್ತರದಾಯಿತ್ವ, ‘ಎನ್’ ಅಂದರೆ ರಾಷ್ಟ್ರೀಯ ಸಾರ್ವಭೌಮತ್ವ, ‘ಎ’ ಅಂದರೆ ಎಲ್ಲರಿಗೂ ಲಭ್ಯವಾಗುವ ಮತ್ತು ಎಲ್ಲರನ್ನೂ ಒಳಗೊಂಡ, ‘ವಿ’ ಅಂದರೆ ಸ್ವೀಕಾರಾರ್ಹವಾದ ಮತ್ತು ಕಾನೂನುಬದ್ಧವಾದ ಎಂದು ಅರ್ಥ ಎಂದು ಮೋದಿ ವಿಶ್ಲೇಷಿಸಿದ್ದಾರೆ.
ನಾವು ಕಚ್ಚಾಸರಕು ಆಗಬಾರದು:ಎಐ ವಿಕಾಸದ ಹಾದಿಯಲ್ಲಿ ಮನುಷ್ಯ ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ಸರಕು ಎಂಬಂತಾಗಬಾರದು. ಹೀಗಾಗಿ ಎಐ ಅನ್ನು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿಗೆ ಎಐ ತಂತ್ರಜ್ಞಾನವು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಶಕ್ತೀಕರಣದ ಮಾಧ್ಯಮವಾಗಬೇಕು ಎಂದಿದ್ದಾರೆ.
ಎಐ ಅನ್ನು ಎರಡು ರೀತಿಯಲ್ಲಿ ನೋಡುವ ಜನರಿದ್ದಾರೆ. ಕೆಲವರಿಗೆ ಇದು ಆತಂಕದಂತೆ ಕಂಡರೆ, ಇನ್ನು ಕೆಲವರಿಗೆ ಎಐನಲ್ಲಿ ಭವಿಷ್ಯ ಕಾಣುತ್ತದೆ. ಭಾರತವು ಪ್ರತಿಭೆ, ಇಂಧನ ಸಾಮರ್ಥ್ಯ ಮತ್ತು ನೀತಿಯ ಸ್ಪಷ್ಟತೆಯ ಸ್ಪಷ್ಟ ಬೆಂಬಲದೊಂದಿಗೆ ಎಐನಲ್ಲಿ ಭವಿಷ್ಯವನ್ನು ಕಾಣುತ್ತಿದೆ. ಭಾರತವು ಎಐಗೆ ಹೆದರಲ್ಲ, ಬದಲಾಗಿ ಎಐನಲ್ಲಿ ಭವಿಷ್ಯದ ನೀಲನಕ್ಷೆಯನ್ನು ನೋಡುತ್ತಿದೆ.---
ಎಐಗೆ ಮುಕ್ತವಾಗಿ ಹಾರಾಡಲು ಬಿಡಬೇಕು ಆದರೆ ಅದರ ದಾರ ಅಂದರೆ ನಿಯಂತ್ರಣ ಮಾತ್ರ ಮನುಷ್ಯನ ಕೈಯಲ್ಲೇ ಇರಬೇಕು ಎಂದು ಪ್ರತಿಪಾದಿಸಿದ ಮೋದಿ, ಇದಕ್ಕಾಗಿ ಜಿಪಿಎಸ್‌ನ ಉದಾಹರಣೆಯನ್ನೂ ನೀಡಿದರು. ನ್ಯಾವಿಗೇಷನ್ ಟೂಲ್ಸ್‌ಗಳು ನೀವು ಯಾವ ದಾರಿಯಲ್ಲಿ ಹೋಗಬಹುದು ಎಂದು ಸಲಹೆಗಳನ್ನು ನೀಡುತ್ತವೆ. ಆದರೆ ಹೋಗುವ ದಾರಿಯನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರ ಬಳಕೆದಾರರನೇ ಮಾಡಬೇಕು ಎಂದರು. ನಾವು ಈಗ ಎಐ ಅನ್ನು ಯಾವ ದಿಕ್ಕಿನಲ್ಲಿ ಕರೆದೊಯ್ಯುತ್ತೇವೆಯೋ ಅದೇ ಮುಂದೆ ಭವಿಷ್ಯದ ಮಾರ್ಗವನ್ನು ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.----
ಭಾರತ ಎಐ ಕ್ರಾಂತಿಯ ಸಣ್ಣಭಾಗ, ಆದ್ರೆ ನೇತೃತ್ವ ನಮ್ಮದೇ!ಎಐ ನಮ್ಮ ವ್ಯವಸ್ಥೆಯನ್ನು ಇನ್ನಷ್ಟು ಸ್ಮಾರ್ಟ್, ಹೆಚ್ಚು ದಕ್ಷ ಹಾಗೂ ಪ್ರಭಾವಶಾಲಿ ಮಾಡುತ್ತದೆ. ಸೃಜನಶೀಲ ಪಾತ್ರ ನಿರ್ವಹಿಸುವವರಿಗೆ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ. ಎಐ ಎಂಬುದು ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೊಸ ಉದ್ದಿಮೆಗಳ ಸೃಷ್ಟಿಗೆ ಒದಗಿದ ಅವಕಾಶ. ಕೃತಕ ಬುದ್ಧಿಮತ್ತೆಯು ಮಾನವ ಇತಿಹಾಸದಲ್ಲಿ ಬದಲಾವಣೆಯ ಹೊಸದೊಂದು ಅಧ್ಯಾಯವನ್ನು ತೆರೆದಿದೆ. ಭಾರತವು ಎಐ ಕ್ರಾಂತಿಯ ಸಣ್ಣ ಭಾಗ ನಿಜ. ಆದರೆ ಈ ಕ್ರಾಂತಿಯ ನೇತೃತ್ವವಹಿಸುವ ಮತ್ತು ಅದಕ್ಕೆ ರೂಪುರೇಷೆ ನೀಡುವ ಕೆಲಸವನ್ನು ಭಾರತ ಮಾಡುತ್ತಿದೆ.