ಭಾರತ - ಮಾಲ್ಡೀವ್ಸ್‌ ಮತ್ತೆ ಭಾಯಿ ಭಾಯಿ!

KannadaprabhaNewsNetwork |  
Published : Jul 26, 2025, 12:30 AM ISTUpdated : Jul 26, 2025, 04:47 AM IST
PM Modi and Muhammed Muizziu

ಸಾರಾಂಶ

ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು  

 ಮಾಲೆ :  ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಉಭಯ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ.

 ಇದರ ದ್ಯೋತಕವಾಗಿ ಮೋದಿ 4,850 ಕೋಟಿ ರು. ಸಾಲವನ್ನು ಮಾಲ್ಡೀವ್ಸ್‌ಗೆ ಘೋಷಿಸಿದ್ದಾರೆ.ಬ್ರಿಟನ್ ಪ್ರವಾಸ ನಡೆಸಿದ್ದ ಮೋದಿ ಮೋದಿ ಶುಕ್ರವಾರ ಮಧ್ಯಾಹ್ನ ಮಾಲೆಯ ವೆಲೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.ಈ ವೇಳೆ, ಈ ಹಿಂದೆ ಭಾರತದ ವಿರುದ್ಧ ಕೆಂಡ ಕಾರಿದ್ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರೇ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಿದ್ಯಾರ್ಥಿಗಳು ಕೂಡ ಭಾರತೀಯ ಸಾಂಪ್ರದಾಯಿಕ ನೃತ್ಯದ ಮೂಲಕ ವಿಶೇಷ ಸ್ವಾಗತ ಕೋರಿದರು.

ದ್ವೀಪರಾಷ್ಟ್ರಕ್ಕೆ 4,850 ಕೋಟಿ ರು. ಸಾಲ: 

ಅಧ್ಯಕ್ಷ ಮುಯಿಜು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಈ ವರ್ಷ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ 60 ವರ್ಷಗಳು ಪೂರೈಸುತ್ತಿದ್ದರೂ, ನಮ್ಮ ಪರಸ್ಪರ ಸಂಬಂಧಗಳ ಬೇರುಗಳು ಇತಿಹಾಸಕ್ಕಿಂತಲೂ ಹಳೆಯದಾಗಿದ್ದು, ಸಮುದ್ರದಷ್ಟು ಆಳವಾಗಿವೆ. ನಾವು ಶಾಶ್ವತ ನೆರೆಹೊರೆಯವರಾಗಿ ಮಾತ್ರವಲ್ಲ, ಸಹಪ್ರಯಾಣಿಕರಾಗಿ ಕೂಡ ಬೆಸೆದುಕೊಂಡಿದ್ದೇವೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಗೆ ಹೊಸ ತಿರುವಾಗಿ, ಮಾಲ್ಡೀವ್ಸ್‌ಗೆ 4,850 ಕೋಟಿ ರು. ಸಾಲ ಸಹಾಯವನ್ನು ನೀಡಲು ನಿರ್ಧರಿಸಿದ್ದೇವೆ’ ಎಂದು ಘೋಷಿಸಿದರು.ಇದೇ ವೇಳೆ, ಉಭಯ ನಾಯಕರು ಭಾರತದ ಜತೆಗಿನ ಸಂಬಂಧದ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು.

  8 ಒಪ್ಪಂದಗಳಿಗೆ ಸಹಿ: ಪ್ರಧಾನಿ ಮೋದಿ ಹಾಗೂ ಮುಯಿಜು ವ್ಯಾಪಾರ, ರಕ್ಷಣೆ, ಮೂಲಸೌಕರ್ಯ ಮೊದಲಾದ ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ 8 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.* ಮಾಲ್ಡೀವ್ಸ್‌ಗೆ 4,850 ಕೋಟಿ ರು.ಗಳ ಸಾಲದ ಸಾಲ ವಿಸ್ತರಣೆ

* ಸಾಲ ಮರುಪಾವತಿಯ ನಿಯಮಗಳನ್ನು ಸಡಿಲಗೊಳಿಸುವ ಪರಿಷ್ಕೃತ ಒಪ್ಪಂದ

* ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳ ಜಾರಿ

* ಭಾರತದ ಜತೆಗಿನ ಸಂಬಂಧದ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

* ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳು

* ಭಾರತದ ಖರೀದಿದಾರರ ಸಾಲ ಸೌಲಭ್ಯಗಳ ಅಡಿಯಲ್ಲಿ ಹುಲ್ಹುಮಲೆಯಲ್ಲಿ 3,300 ಸಾಮಾಜಿಕ ವಸತಿ ಘಟಕಗಳ ಹಸ್ತಾಂತರ

* ಅಡ್ಡು ನಗರದಲ್ಲಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯ ಉದ್ಘಾಟನೆ

* ಮಾಲ್ಡೀವ್ಸ್‌ನಲ್ಲಿ 6 ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

* 72 ವಾಹನಗಳು ಮತ್ತು ಇತರ ಉಪಕರಣಗಳ ಹಸ್ತಾಂತರ

ಇಂದು ಮಾಲ್ಡೀವ್ಸ್‌ ಸ್ವಾತಂತ್ರ್ಯ ದಿನದಲ್ಲಿ ಮೋದಿ 

ಶನಿವಾರ ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಸಹಯೋಗದೊಂದಿಗೆ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

PREV
Read more Articles on

Recommended Stories

ಫೇಸ್‌ಬುಕ್ಕಲ್ಲಿ ರಾಜಕೀಯ ಜಾಹೀರಾತು ಸ್ಥಗಿತ: ಯುರೋಪ್‌ನಲ್ಲಿ ಜಾರಿ
ರಾಹುಲ್‌ ಗಾಂಧಿ 2ನೇ ಅಂಬೇಡ್ಕರ್‌: ಕಾಂಗ್ರೆಸ್‌ ನಾಯಕ ಉದಿತ್‌ ರಾಜ್