ಒಬ್ಬೊಬ್ಬರೇ ಕಾಂಗ್ರೆಸ್‌ ಬಿಡುತ್ತಿದ್ದಾರೆ, ಒಂದು ಕುಟುಂಬ ಉಳಿದಿದೆ: ಮೋದಿ

KannadaprabhaNewsNetwork |  
Published : Feb 17, 2024, 01:21 AM ISTUpdated : Feb 17, 2024, 02:35 PM IST
pm modi rajasthan

ಸಾರಾಂಶ

ಸ್ವಜನಪಕ್ಷಪಾತದ ವಿಷವರ್ತುಲದಲ್ಲಿ ಕಾಂಗ್ರೆಸ್‌ ಸಿಲುಕಿದ್ದು, ಗಾಂಧಿ ಕುಟುಂಬನ್ನು ಬಿಟ್ಟು ಎಲ್ಲರೂ ಕಾಂಗ್ರೆಸ್‌ ತೊರೆಯುತ್ತಿದ್ದಾರೆ ಎಂದು ವಿಕಸಿತ ಭಾರತ, ವಿಕಸಿತ ರಾಜಸ್ಥಾನ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.

ಜೈಪುರ: ‘ಕಾಂಗ್ರೆಸ್‌ ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿರುವ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನು ಒಬ್ಬೊಬ್ಬರಾಗಿ ಬಿಡುತ್ತಿದ್ದಾರೆ.

ಕೊನೆಗೆ ಒಂದು ಕುಟುಂಬ ಮಾತ್ರ ಆ ಪಕ್ಷದೊಳಗೆ ಕಾಣುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. 

ವಿಕಸಿತ ಭಾರತ ವಿಕಸಿತ ರಾಜಸ್ಥಾನ ಸನಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಏಕಮಾತ್ರ ಉದ್ದೇಶವಿದೆ. ಅದೆಂದರೆ ಪ್ರಧಾನಿ ಮೋದಿಯನ್ನು ವಿರೋಧಿಸುವುದು.

ಈ ಗುರಿಯನ್ನು ಸಾಧಿಸಲು ತಾನು ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿ ದೇಶವನ್ನು ಕಾಂಗ್ರೆಸ್‌ ಪಕ್ಷ ವಿಭಜಿಸಿದೆ. ಆ ಪಕ್ಷಕ್ಕೆ ಕುಟುಂಬ ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ. 

ಹಾಗಾಗಿ ಇಂದು ಎಲ್ಲರೂ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದು, ಕೇವಲ ಒಂದು ಕುಟುಂಬವನ್ನು ಮಾತ್ರ ಆ ಪಕ್ಷದಲ್ಲಿ ಕಾಣಬಹುದಾಗಿದೆ’ ಎಂದು ಟೀಕಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪುತ್ರಿ ಶುಲ್ಕ ಭರಿಸಲು ಬರಿಗಾಲಲ್ಲೇಮ್ಯಾರಾಥಾನ್‌ ಓಡಿ ಗೆದ್ದ ಮಹಿಳೆ!
ಪಾಕ್‌, ಚೀನಾ ವಿರುದ್ಧ ಮೋದಿ ಕಿಡಿ