ದೇಶದ ನನ್ನ ಕುಟುಂಬಗಳ ಶ್ರೇಯಸ್ಸಿಗೆ ಕಾಶಿ ವಿಶ್ವನಾಥನಲ್ಲಿ ಪ್ರಾರ್ಥನೆ: ಮೋದಿ

KannadaprabhaNewsNetwork |  
Published : Mar 11, 2024, 01:23 AM ISTUpdated : Mar 11, 2024, 06:58 AM IST
PM Modi, Kashi Vishwanath temple, Kaziranga, Kashi, Arunachal Pradesh, West Bengal, Varanasi, Kaziranga National Park, Siliguri, Itanagar, Jorhat, Lachit Borphukan, Yogi Adityanath

ಸಾರಾಂಶ

ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ ಸಮಸ್ತ ದೇಶವೆಂಬ ಕುಟುಂಬದ ನನ್ನ ಪರಿವಾರಕ್ಕೆ ಆಯುರಾರೋಗ್ಯ ಐಶ್ವರ್ಯ ಸಿಗಲಿ ಎಂಬುದಾಗಿ ಕಾಶಿ ವಿಶ್ವನಾಥನಲ್ಲಿ ಬೇಡಿಕೊಂಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ವಾರಾಣಸಿ: ಕಾಶಿಯ ವಿಶ್ವನಾಥ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ನಾನು ಭಾರತದ ‘ತಮ್ಮ ಕುಟುಂಬ’ಗಳ ಒಳಿತಿಗಾಗಿ ವಿಶ್ವನಾಥನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಮೂಲಕ ಇತ್ತೀಚೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ನೀಡಿದ್ದ ‘ಪ್ರಧಾನಿ ಮೋದಿಗೆ ಕುಟುಂಬವೇ ಇಲ್ಲ’ ಎಂಬ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.

ಶನಿವಾರದ ತಮ್ಮ ಕಾಶಿ ಭೇಟಿ ಕುರಿತು ಭಾನುವಾರ ಟ್ವೀಟ್‌ ಮಾಡಿದ ಮೋದಿ ಅವರು,‘ಕಾಶಿ ವಿಶ್ವನಾಥನಲ್ಲಿ ಪ್ರತಿ ಬಾರಿ ಪ್ರಾರ್ಥನೆ ಸಲ್ಲಿಸಿದಾಗ ವಿಶಿಷ್ಟ ಹಾಗೂ ತೃಪ್ತಿ ಸಿಗುತ್ತದೆ. ಕಾಶಿಯಲ್ಲಿ ವಿಶೇಷವಾಗಿ ದೇಶದ ನನ್ನ ಕುಟುಂಬ ವರ್ಗಕ್ಕೆ ಒಳ್ಳೆಯ ಆರೋಗ್ಯ, ಸುಖ ಸಂತೋಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!
ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ