ಶ್ರೀಕೃಷ್ಣನೇ ನನ್ನ ಹಣೆಬರಹದಲ್ಲಿ ಸುದರ್ಶನ ಸೇತು ಬರೆದಿದ್ದ: ಮೋದಿ

KannadaprabhaNewsNetwork | Updated : Feb 26 2024, 03:03 PM IST

ಸಾರಾಂಶ

ನನ್ನ ಬಳಿಯೇ ಸುದರ್ಶನ ಸೇತುವಿನ ಲೋಕಾರ್ಪಣೆ ಕೆಲಸ ಮಾಡಿಸಿದ್ದಕ್ಕೆ ಶ್ರೀಕೃಷ್ಣನಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ದ್ವಾರಕಾ: ದ್ವಾರಕೆಯಿಂದ ಬೇಟ್‌ ದ್ವಾರಕೆಗೆ ಸಂಪರ್ಕ ಕಲ್ಪಿಸುವ 2.32 ಕಿ.ಮೀ ಉದ್ದದ ಕೇಬಲ್‌ ಸೇತುವೆಯನ್ನು (ಸುದರ್ಶನ ಸೇತುವೆ) ನನ್ನಿಂದಲೇ ನಿರ್ಮಿಸುವುದು ಶ್ರೀಕೃಷ್ಣನ ಇಚ್ಛೆಯಾಗಿತ್ತು. ಅದೀಗ ಪೂರ್ಣಗೊಂಡಿದೆ. 

ಇದಕ್ಕಾಗಿ ಶ್ರೀಕೃಷ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮನ ಬಳಿಕ ಮೋದಿ ಕೃಷ್ಣನನ್ನು ಭಜಸಿದ್ದಾರೆ.

ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕೇಂದ್ರದ ಕಾಂಗ್ರೆಸ್‌ ಸರ್ಕಾರಕ್ಕೆ ಈ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದೆ. ಆದರೆ ಅವರು ಅದನ್ನು ಕಡೆಗಣಿಸಿದ್ದರು. 

ಆದರೆ ಇಂದು ಅದೇ ಸೇತುವೆಯನ್ನು ನಾನು ಉದ್ಘಾಟಿಸಿದ್ದೇನೆ. ನನ್ನ ಕನಸು ನನಸಾಗಿದ್ದಕ್ಕೆ ನನ್ನ ಹೃದಯ ತುಂಬಿಬಂದಿದೆ. ಹೀಗಾಗಿಯೇ ನಾನು ಶ್ರೀಕೃಷ್ಣನಿಗೆ ನವಿಲುಗರಿ ಅರ್ಪಿಸಿದ್ದೇನೆ. 

ಈ ನಿರ್ಮಾಣ ನನ್ನಿಂದಲೇ ಆಗಬೇಕೆಂದು ಶ್ರೀಕೃಷ್ಣ ನನ್ನ ಹಣೆಯಲ್ಲಿ ಬರೆದಿದ್ದ. ಅದನ್ನು ಇದೀಗ ಶ್ರೀಕೃಷ್ಣ ಸಾಧ್ಯವಾಗಿಸಿದ್ದಾನೆ. ಅದಕ್ಕಾಗಿ ನಾನು ಆತನಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

Share this article