ಅ.10ಕ್ಕೆ ಮೋದಿ ಲಾವೋಸ್ ಪ್ರವಾಸ: ಆಸಿಯಾನ್‌ ಸಭೆಯಲ್ಲಿ ಭಾಗಿ

KannadaprabhaNewsNetwork |  
Published : Oct 09, 2024, 01:32 AM IST
ಮೋದಿ | Kannada Prabha

ಸಾರಾಂಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 21ನೇ ಆಸಿಯಾನ್‌-ಭಾರತ ಶೃಂಗಸಭೆ ಹಾಗೂ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಅ.10-11ರಂದು ಲಾವೋಸ್‌ಗೆ ತೆರಳಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 21ನೇ ಆಸಿಯಾನ್‌-ಭಾರತ ಶೃಂಗಸಭೆ ಹಾಗೂ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಅ.10-11ರಂದು ಲಾವೋಸ್‌ಗೆ ತೆರಳಲಿದ್ದಾರೆ.

ಪ್ರಸ್ತುತ ಆಸಿಯಾನ್‌ನ ಅಧ್ಯಕ್ಷ ದೇಶವಾಗಿರುವ ಲಾವೋಸ್‌ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಆಹ್ವಾನದ ಮೇರೆಗೆ ಮೋದಿ ರಾಜಧಾನಿ ವಿಯೆಂಟಿಯಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ವೇಳೆ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.

‘ಆಸಿಯಾನ್‌-ಭಾರತ ಶೃಂಗಸಭೆಯಲ್ಲಿ ದೇಶಗಳು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ತಮ್ಮ ಸಂಬಂಧದ ಪ್ರಗತಿಯನ್ನು ಪರಿಶೀಲಿಸಿಕೊಂಡು ಭವಿಷ್ಯದಲ್ಲಿ ಸಹಕಾರದ ಕುರಿತು ನಿರ್ಧರಿಸಲಿವೆ. ಅಂತೆಯೇ ಪೂರ್ವ ಏಷ್ಯಾ ಶೃಂಗಸಭೆಯು ಈ ಪ್ರದೇಶದಲ್ಲಿ ಪರಸ್ಪರ ನಂಬಿಕೆಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿದ್ದು, ಭಾರತ ಸೇರಿದಂತೆ ಇತರೆ ಸದಸ್ಯ ರಾಷ್ಟ್ರಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ನಿಲುವುಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ’ ಎಂದು ಇಲಾಖೆ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಶ್ಮೀರಿಗಳಿಂದ ಇರಾನಿಗರ ನೆರವಿಗೆ ಚಿನ್ನ, ಬೆಳ್ಳಿ ದಾನ!
2011ರ ಗಣತಿ ಆಧರಿಸಿ ಸಂಸತ್ತಲ್ಲಿ ಶೇ.33 ಮಹಿಳಾ ಮೀಸಲು?