ಮೋದಿ, ಶಾ, ಜ್ಞಾನೇಶ್‌ ದೇಶ ದ್ರೋಹಿಗಳು: ರಾಹುಲ್‌

KannadaprabhaNewsNetwork |  
Published : Sep 25, 2026, 03:45 AM IST
Rahul Gandhi

ಸಾರಾಂಶ

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಸಿಇಸಿ ಜ್ಞಾನೇಶ್‌ ಕುಮಾರ್‌ ಈ ದೇಶದ ಚುನಾವಣಾ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಅವರು ದೇಶದ್ರೋಹಿಗಳು. ಜ್ಞಾನೇಶ್‌ ಕುಮಾರ್‌ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಸಿಇಸಿ ಜ್ಞಾನೇಶ್‌ ಕುಮಾರ್‌ ಈ ದೇಶದ ಚುನಾವಣಾ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಅವರು ದೇಶದ್ರೋಹಿಗಳು. ಜ್ಞಾನೇಶ್‌ ಕುಮಾರ್‌ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಬೇಕು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸದ್ದಾಂ, ಕಿಂಗ್‌ ಜಾಂಗ್‌ ಆಡಳಿತ: 

ಸಿಇಸಿ ಜ್ಞಾನೇಶ್‌ ಕುಮಾರ್‌ ನಿರ್ಣಯಗಳಿಗೆ ಇನ್ನಿಬ್ಬರು ಚುನಾವಣಾ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರು ಎಂಬ ಆರೋಪಗಳ ಬೆನ್ನಲ್ಲೇ, ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್‌, ‘2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಆಡಳಿತ ವಿರೋಧಿ ಅಲೆ ಇದ್ದರೂ ಪ್ರಧಾನಿ ಮೋದಿ ‘ಅಬ್‌ ಕಿ ಬಾರ್‌ 400 ಬಾರ್‌’ ಘೋಷಣೆ ಕೂಗುತ್ತಿದ್ದರು. ಅವರ ಆತ್ಮವಿಶ್ವಾಸವು, ‘ಅವರಿಗೆ ಆಡಳಿತ ವಿರೋಧಿ ಅಲೆ ಎದುರಾಗುವುದಿಲ್ಲ’ ಎಂಬುದನ್ನು ತೋರಿಸಿಕೊಟ್ಟಿದೆ.

ಕಿಮ್ ಜಾಂಗ್ ಉನ್ ಅವರ ಉತ್ತರ ಕೊರಿಯಾದಲ್ಲಿ ಆಡಳಿತ ವಿರೋಧಿ ಅಲೆ ಕಂಡುಬರುವುದಿಲ್ಲ

ಸದ್ದಾಂ ಹುಸೇನ್‌ನ ಇರಾಕ್ ಮತ್ತು ಕಿಮ್ ಜಾಂಗ್ ಉನ್ ಅವರ ಉತ್ತರ ಕೊರಿಯಾದಲ್ಲಿ ಆಡಳಿತ ವಿರೋಧಿ ಅಲೆ ಕಂಡುಬರುವುದಿಲ್ಲ’ ಎಂದು ಚಾಟಿ ಬೀಸಿದರು. ಜೊತೆಗೆ. ಮೋದಿ ಆಡಳಿತದಲ್ಲಿ ಎಲ್ಲಾ ಚುನಾವಣೆಗಳ ಫಲಿತಾಂಶಗಳನ್ನು ತಿರುಚಲಾಗಿದೆ ಮತ್ತು 2024ರ ಚುನಾವಣೆಯು ಸಂಪೂರ್ಣ ನಕಲಿಯಾಗಿತ್ತು ಎಂದು ಆರೋಪಿಸಿದರು.ಮೂವರು ದೇಶದ್ರೋಹಿಗಳು:‘ಎಲ್ಲಾ ಚುನಾವಣೆಗಳಲ್ಲೂ ಅಕ್ರಮ ನಡೆಯುತ್ತಿದೆ.

ಜ್ಞಾನೇಶ್ ಕುಮಾರ್ ಅವರನ್ನು ಮೋದಿ ಮತ್ತು ಶಾ ಆಯ್ಕೆ ಮಾಡಿದ್ದರು. ಆದರೆ ಈಗ ಇಬ್ಬರು ಚುನಾವಣಾ ಆಯುಕ್ತರು, ನಮ್ಮ ಮತದಾನ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಹಾಗೂ ಹಾನಿಗೆ ಜ್ಞಾನೇಶ್ ಅವರೇ ಕಾರಣ ಎಂದು ಹೇಳುತ್ತಿದ್ದಾರೆ. ಅವರು ದೇಶದ ವಿರುದ್ಧ ಕೆಲಸ ಮಾಡಿದ್ದಾರೆ. ಮೋದಿ, ಶಾ ಮತ್ತು ಜ್ಞಾನೇಶ್ ದೇಶದ್ರೋಹಿಗಳು. ಅವರು ತನಿಖೆಯನ್ನು ಎದುರಿಸಬೇಕು. ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗ್ರೇಟರ್‌ ನೋಯ್ಡಾದಲ್ಲಿ ಬಸ್ಸಿಗೆಬೆಂಕಿ: 9 ಮಂದಿ ಸಜೀವ ದಹನ
ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ