ಬಿಜೆಪಿಗೆ ಪಿಎಂಕೆ, ಎಂಎನ್‌ಎಸ್‌ ಬೆಂಬಲ

KannadaprabhaNewsNetwork | Updated : Mar 19 2024, 11:29 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಲ ಸಿಕ್ಕಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಮತ್ತಷ್ಟು ಬಲ ಸಿಕ್ಕಿದೆ.

ತಮಿಳುನಾಡಿನಲ್ಲಿ ಬೇರೂರಲು ಪ್ರಯತ್ನ ಪಡುತ್ತಿರುವ ಬಿಜೆಪಿ ಜೊತೆಗೂಡಿ ಕಣಕ್ಕೆ ಇಳಿಯಲು ಪಿಎಂಕೆ (ಪಟ್ಟಾಲಿ ಮಕ್ಕಳ್‌ ಕಚ್ಚಿ) ಪಕ್ಷ ನಿರ್ಧರಿಸಿದೆ. 

ಪಿಎಂಕೆ ಇದುವರೆಗೂ ಎಐಎಡಿಎಂಕೆ ಜೊತೆಯಲ್ಲಿದ್ದು, ಇದೀಗ ಬಿಜೆಪಿ ಪಾಳಯ ಸೇರಿದೆ. ರಾಜ್ಯದಲ್ಲಿ ಶೇ.6ರಷ್ಟಿರುವ ಹಿಂದುಳಿದ ವನ್ನಿಯಾರ್‌ ಸಮುದಾಯದ ಮೇಲೆ ಪಿಎಂಕೆ ಪಕ್ಷ ಬಹುವಾಗಿ ಪ್ರಭಾವ ಹೊಂದಿದೆ. 

ಹೀಗಾಗಿ ಈ ಬೆಳವಣಿಗೆ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ರಾಜ್‌ಠಾಕ್ರೆ ನೇತೃತ್ವದ ಎಂಎನ್‌ಎಸ್‌ ಕೂಡಾ ಎನ್‌ಡಿಎ ಮೈತ್ರಿಕೂಟ ಸೇರಲು ನಿರ್ಧರಿಸಿದೆ. 

ಬಿಜೆಪಿ ನಾಯಕರು ಮತ್ತು ರಾಜ್‌ಠಾಕ್ರೆ ನಡುವೆ ನಡೆದ ಮಾತುಕತೆ ವೇಳೆ ಎಂಎನ್‌ಎಸ್‌ಗೆ 1 ಸ್ಥಾನ ಬಿಟ್ಟುಕೊಡಲು ಸಮ್ಮತಿಸಲಾಗಿದೆ. ಈ ಕುರಿತು ಶೀಘ್ರವೇ ಉಭಯ ಬಣಗಳು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.

Share this article