ರಸ್ತೆ ನಡುವೆ ನಮಾಜ್‌ ಮಾಡುತ್ತಿದ್ದವರಿಗೆ ಒದ್ದ ಪೊಲೀಸ್‌: ತನಿಖೆ ಆದೇಶ

KannadaprabhaNewsNetwork |  
Published : Mar 09, 2024, 01:34 AM IST
ದೆಹಲಿ | Kannada Prabha

ಸಾರಾಂಶ

ಉತ್ತರ ದೆಹಲಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ರಸ್ತೆಯ ಮೇಲೇ ನಮಾಜ್‌ ಮಾಡುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ.

ನವದೆಹಲಿ: ಉತ್ತರ ದೆಹಲಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ರಸ್ತೆಯ ಮೇಲೇ ನಮಾಜ್‌ ಮಾಡುತ್ತಿದ್ದ ವ್ಯಕ್ತಿಗಳಿಗೆ ಪೊಲೀಸರೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ವೈರಲ್‌ ಆದ ವಿಡಿಯೋದಲ್ಲಿ, ನೂರಾರು ಜನರು ವಾಹನ ದಟ್ಟಣೆಯ ಮಾರ್ಗದ ರಸ್ತೆಯಲ್ಲೇ ನಮಾಜ್‌ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸೊಬ್ಬರು ನಮಾಜ್‌ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರಾರ್ಥನೆ ಮಾಡುತ್ತಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾತ್ಮಕ ಜಿರಳೆಗಳ ಕೇಸ್‌ ಮುಂದುವರಿಸಿ : ಸುಪ್ರೀಂ
ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಗೆ ಸೋಲು!