ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಚಲಿಸುತ್ತಿದ್ದ ಸ್ಲೀಪರ್‌ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 9 ಮಂದಿ ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ಬುಧವಾರ ರಾತ್ರಿ 11.20ರ ವೇಳೆಗೆ ನಡೆದಿದೆ.

ನೋಯ್ಡಾ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಚಲಿಸುತ್ತಿದ್ದ ಸ್ಲೀಪರ್‌ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 9 ಮಂದಿ ಪ್ರಯಾಣಿಕರು ಸಜೀವ ದಹನವಾದ ದಾರುಣ ಘಟನೆ ಬುಧವಾರ ರಾತ್ರಿ 11.20ರ ವೇಳೆಗೆ ನಡೆದಿದೆ.

ಘಟನೆ ವೇಳೆ ಬಸ್ಸಿನಲ್ಲಿ 35 ಪ್ರಯಾಣಿಕರಿದ್ದು, ಬಸ್ಸು ದೆಹಲಿ ಕಾಶ್ಮೀರ ಗೇಟ್‌ನಿಂದ ಉತ್ತರಪ್ರದೇಶದ ಮಹೂಬಾಕ್ಕೆ ಚಲಿಸುತ್ತಿತ್ತು. ಬಸ್ಸಿನಲ್ಲಿ ಬೆಂಕಿ ಕಾಣಿಸುತ್ತಲೇ

ಆತಂಕಗೊಂಡ ಕೆಲ ಪ್ರಯಾಣಿಕರು ಬಸ್ಸಿನಿಂದ ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಉಳಿದಂತೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ 20 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸತ್ತರೆ ಸಾಯಿಸಿ ಬಸ್‌ ನಿಲ್ಲಿಸಲ್ಲ - ಎಚ್ಚರಿಸಿದರೂ ಬಸ್‌ ನಿಲ್ಲಿಸದ ಚಾಲಕ

ನೋಯ್ಡಾ: ಬಸ್‌ ದುರಂತಕ್ಕೆ ಚಾಲಕ, ನಿರ್ವಾಹಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಬಸ್ಸಿನಲ್ಲಿ ಸುಟ್ಟ ವಾಸನೆ ಬರುತ್ತಿದ್ದಂತೆ ಪ್ರಯಾಣಿಕರು ಬಸ್‌ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಚಾಲಕ ನಿರ್ಲಕ್ಷಿಸಿದ್ದಾನೆ. ಬಸ್ಸಿನಲ್ಲಿ ವಾಸನೆ ಸಾಮಾನ್ಯ ಎಂದು ಸುಮ್ಮನಾಗಿದ್ದಾರೆ. ಜತೆಗೆ ‘ನೀವು ಸಾಯಲು ಬಯಸಿದರೆ ಸಾಯಿರಿ, ನಾವು ಬಸ್‌ ನಿಲ್ಲಿಸಲ್ಲ’ ಎಂದು ಚಾಲಕ ದರ್ಪ ಮೆರೆದಿದ್ದಾನೆ ಎಂದು ಪ್ರಯಾಣಿಕರು ದೂರಿದ್ದಾರೆ. ಜೊತೆಗೆ ಬಸ್‌ ಚಾಲನೆ ವೇಳೆ ಚಾಲಕ ಮತ್ತು ಕಂಡಕ್ಟರ್‌ ಬೀಡಿ, ಸಿಗರೇಟ್‌ ಸೇದುತ್ತಿದ್ದರು ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿದೆ.

19 ಸಲ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌

ದುರಂತಕ್ಕೆ ತುತ್ತಾದ ಬಸ್‌ ಕಾನೂನು ಬಾಹಿರವಾಗಿ ಸಂಚರಿಸುತ್ತಿತ್ತು. 19 ಸಲ ಸಂಚಾರ ನಿಯಮ ಉಲ್ಲಂಘಿಸಲಾಗಿತ್ತು. 1.75 ಲಕ್ಷ ರು. ದಂಡ ಬಸ್‌ ಮೇಲಿತ್ತು. ಅಲ್ಲದೇ ಅಪ್ರಾಪ್ತನ ಚಾಲನೆ, ಸೂಕ್ತ ಪರವಾನಗಿ ಇಲ್ಲದಿರುವುದು, ಎಂಜಿನ್‌ನ ಅಸಮರ್ಪಕ ನಿವರ್ಹಣೆ ಸೇರಿದಂತೆ ಪ್ರಮುಖ ಕೇಸ್‌ಗಳಿದ್ದರೂ ಬಸ್‌ ತನ್ನ ಕಾರ್ಯಾಚರಣೆ ಮುಂದುವರೆಸಿತ್ತು.